Webdunia - Bharat's app for daily news and videos

Install App

ದುನಿಯಾ ರಶ್ಮಿ ಅಭಿನಯದ 'ಅಸ್ತಿತ್ವ' ಚಿತ್ರದ ಹಾಡಿನ ವಿಡಿಯೋ ಬಿಡುಗಡೆ

Webdunia
ಗುರುವಾರ, 4 ಆಗಸ್ಟ್ 2016 (11:30 IST)
ನಟ ಯುವರಾಜ್, ದುನಿಯಾ ರಶ್ಮಿ ಅಭಿನಯದ ಅಸ್ತಿತ್ವ ಚಿತ್ರದ 'ಬರಕೋ ನಿನ್ನ ಹಣೆಬರಹ' ಹಾಡಿನ ವಿಡಿಯೋ ರಿಲೀಸ್ ಮಾಡಲಾಗಿದೆ., ಈ ಹಾಡನ್ನು ಕಂಪೋಸ್ ಮಾಡಿದ್ದಾರೆ ವಿಜಯ್ ಆ್ಯಂಟೋನಿ, ಹಾಗೂ ವಿಜಯ್ ಪ್ರಕಾಶ್,  ಈ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಎಂಟ್ರಿ ನೀಡಿರುವ ನಟ ಯುವರಾಜ್ ಈ ಚಿತ್ರದಲ್ಲಿ ನನ್ನದು ವಿಭಿನ್ನವಾದ ಪಾತ್ರ ಎಂದು ತಿಳಿಸಿದ್ದಾರೆ.

 
ಯುವನಟ ಯುವರಾಜ್ ಚೊಚ್ಚಲ ಬಾರಿಗೆ ನಟಿಸಿರುವ ಅಸ್ತಿತ್ವ ಚಿತ್ರಕಕ್ೆ ನಿರ್ಮಾಪಕ ಬಿ.ಎಸ್ ವಿಶ್ವಕಾರ್ಯಪ್ಪ ಬಂಡವಾಳ ಹಾಕಿದ್ದಾರೆ. ನೂತನ ಉಮೇಶ್ ತಮ್ಮ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. 
 
ಕಳೆದ ವಾರ ಧ್ವನಿಸುರುಳಿ ಬಿಡುಗಡೆಯಾಗಿತ್ತು. ಕಳಸಾ ಬಂಡೂರಿ ಹೋರಾಟದಲ್ಲಿ ಭಾಗಿಯಾಗಿರುವ ಮೂವರು ರೈತರನ್ನು ಕರೆಸಿ ಅವರಿಂದ ಚಿತ್ರದ ಸಿಡಿ ಬಿಡುಗಡೆ ಮಾಡಲಾಗಿತ್ತು.  ಚಿತ್ರದಲ್ಲಿ ಮಧುಸೂದನ್  ಶೈನ್ ಶೆಟ್ಟಿ, ನಟಿಯರಾದ ದುನಿಯಾ ರಶ್ಮಿ, ಪ್ರಜ್ವಲ್ ಪೂವಯ್ಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಅಗಸ್ಟ್ ಕೊನೆಯವಾರ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. 

ನಿರ್ದೇಶಕ  ಉಮೇಶ್ ಥ್ರೀಲ್ಲರ್ ಚಿತ್ರ 'ಅಸ್ತಿತ್ವ' ಚಿತ್ರದ ಮೂಲಕ ದುನಿಯಾ ರಶ್ಮಿ  ಮತ್ತೆ ಎಂಟ್ರಿ ನೀಡಿದ್ದಾರೆ. ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ದುನಿಯಾ ರಶ್ಮಿ, ಈ ಚಿತ್ರದಲ್ಲಿ ನನ್ನನ್ನು ಹೊಸ ಅವತಾರದಲ್ಲಿ ನೋಡಬಹುದು ಎಂದು ತಿಳಿಸಿದ್ದರು. ಹೊಸ ಲುಕ್ ಬಗ್ಗೆ ಎಕ್ಸೈಟ್ ಆಗಿದ್ದೇನೆ, ನಾಯಕನ ಗರ್ಲ್‌ಫ್ರೆಂಡ್ ಪಾತ್ರದಲ್ಲಿ ಮಿಂಚುತ್ತಿರುವ ಅವರು  ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದರು.
 
ಶೂಟಿಂಗ್ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದ ರಶ್ಮಿ, ಶೂಟಿಂಗ್ ವೇಳೆ ಎಲ್ಲರೂ ಎಂಜಾಯ್ ಮಾಡಿದ್ದೇವೆ... ಇಡೀ ಟೀಮ್ ಸಂಪೋರ್ಟಿವ್ ಆಗಿತ್ತು. ಬೇರೆವರಿಗೆ ಹೋಲಿಸಿದ್ರೆ, ನಾನೇ ಸೆಟ್‌ನಲ್ಲಿ ಸೀನಿಯರ್ ಆಗಿದ್ದೆ, ಆದ್ದರಿಂದ ಎಲ್ಲರೂ ಕೇರ್ ತೆಗೆದುಕೊಂಡು ತುಂಬಾ ಗೌರವ ನೀಡಿದ್ದರು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments