Select Your Language

Notifications

webdunia
webdunia
webdunia
webdunia

ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿದ ನಟಿ ಐಶ್ವರ್ಯಾ ರೈ

ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿದ ನಟಿ ಐಶ್ವರ್ಯಾ ರೈ
ಮುಂಬೈ , ಬುಧವಾರ, 27 ಜನವರಿ 2016 (10:48 IST)
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ  ಫ್ರಾಂಕೋಯಿಸ್‌ ಹೊಲ್ಲಾಂಡೆ ಅವರನ್ನು ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ನಿನ್ನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
 
ಫ್ರಾನ್ಸ್ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿ  ನಿನ್ನೆ ಮಧ್ಯಾಹ್ನ ಭೋಜನ ಕೂಟ ಆಯೋಜಿಸಿತ್ತು. ಭೋಜನ ಕೂಟಕ್ಕೆ ತಾರೆಯರಾದ ಐಶ್ವರ್ಯಾ ರೈ, ಶಾರುಖ್ ಖಾನ್, ಆದಿತ್ಯಾ ಛೋಪ್ರಾ ಅವರನ್ನು ಆಮಂತ್ರಿಸಲಾಗಿತ್ತು. ಭೋಜನ ಕೂಟದಲ್ಲಿ ಭಾಗಿಯಾಗಿದ್ದ ಐಶ್ ಬೇಬಿ ಫ್ರಾನ್ಸ್ ಅಧ್ಯಕ್ಷ ಹೋಲಾಂಡೆ ಜೊತೆ ಮಾತುಕತೆ ನಡೆಸಿದ್ರು. ಇನ್ನು ಐಶ್ವರ್ಯಾ ರೈ ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದರು. ಗುಲಾಬಿ ಬಣ್ಣದ ಬನಾರಸ್ ಸೀರೆಯಲ್ಲಿ ಪಕ್ಕಾ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದರು.
 
ಈ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಐಶ್ವರ್ಯಾ ಎಲ್ಲಾ ತನ್ನ ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ರು.ಈ ಹಿಂದೆ ಶಾರುಖ್ ಖಾನ್ ಹಾಗೂ ಐಶ್ವರ್ಯಾ ರೈ ಫ್ರಾನ್ಸ್ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗೆ ಪಾತ್ರವಾಗಿದ್ದರು. ಅಲ್ಲದೇ ಫ್ರಾನ್ಸ್ ನಲ್ಲಿ ನಡೆಯೋ ಚಲನಚಿತ್ರೋತ್ಸವದಲ್ಲಿ ಐಶ್ ಪ್ರತಿ ವರ್ಷ ಭಾಗವಹಿಸುತ್ತಾರೆ.

Share this Story:

Follow Webdunia kannada