Webdunia - Bharat's app for daily news and videos

Install App

ಅಪೂರ್ವ ಸಿನಿಮಾಕ್ಕೆ ಭೇಷ್ ಅಂದ ಸಿನಿ ರಸಿಕರು

Webdunia
ಶನಿವಾರ, 28 ಮೇ 2016 (10:44 IST)
ಬಹು ದಿನಗಳ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕನಾಗಿ ಅಭಿನಯಿಸಿರುವ ಸಿನಿಮಾ ಅಪೂರ್ವ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಅಪೂರ್ವ ಸಿನಿಮಾ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದ್ರೆ ಕಾರಣಾತರಗಳಿಂದ ಸಿನಿಮಾವ್ನನು ತಡವಾಗಿ ರಿಲೀಸ್ ಮಾಡಿದ್ದಾರೆ ರವಿಚಂದ್ರನ್. ಅಂದ್ಹಾಗೆ ಅಪೂರ್ವ ಸಿನಿಮಾ ರಿಲೀಸ್ ಆದ ಮೊದಲ ಸಿನಿಮಾಕ್ಕೆ ರವಿಚಂದ್ರನ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಅಂದ್ಹಾಗೆ ಅಪೂರ್ವ ಸಿನಿಮಾ 19 ವರ್ಷದ ಹುಡುಗಿ ಅಪೂರ್ವ ಹಾಗೂ 61 ವರ್ಷದ ರಾಜಶೇಖರ್ ನಡುವೆ ನಡೆಯುವ ಪ್ರೇಮಕಥೆ ಆಧಾರಿತ ಸಿನಿಮಾ. ಇಬ್ಬರ ನಡುವಿನ ಪ್ರೇಮಕಥೆಯೇ ಸಿನಿಮಾದ ಕಥಾವಸ್ತು. ಈ ಹಿಂದೆ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರು ಅಭಿನಯಿಸಿದ್ದ ಚಿನಿ ಕಮ್ ಸಿನಿಮಾವನ್ನೇ ಇದು ಹೋಲುತ್ತದೆ.ಅಂದ್ಹಾಗೆ ಈ ಸಿನಿಮಾವನ್ನು ತುಂಬಾ ಮುತುವರ್ಜಿ ವಹಿಸಿ ರವಿಚಂದ್ರನ್ ಅವರು ಮಾಡಿದ್ದಾರೆ.
 
 ಲಿಫ್ಟ್ ನಲ್ಲಿ ಪರಿಚಯವಾಗುವ ಅಪೂರ್ವ ಹಾಗೂ ರವಿಚಂದ್ರನ್ ಮುಂದೆ ಪ್ರೇಮಿಗಳಾಗುತ್ತಾರೆ. ತನ್ನ ಅಪ್ಪನ ವಯಸ್ಸಿಗಿಂತಲೂ ಹಿರಿಯವನಾದ ವ್ಯಕ್ತಿ ಜೊತೆ ಪ್ರೀತಿಯಲ್ಲಿ ಬೀಳೋದೇ ಈ ಸಿನಿಮಾದ ಹೈಲೈಟ್ಸ್.
 
ಇನ್ನು ಸಿನಿಮಾದಲ್ಲಿ ರವಿಚಂದ್ರನ್ ಅವರು ಕೆಲ ಫಿಲಾಸಫಿಗಳನ್ನೂ ಹೇಳಿದ್ದಾರೆ .ಅಂದ್ಹಾಗೆ ಸಿನಿಮಾದ ಛಾಯಾಗ್ರಹಣ ತುಂಬಾನೇ ಅದ್ಧೂರಿಯಾಗಿ ಮೂಡಿ ಬಂದಿದೆ. ಛಾಯಾಗ್ರಾಹಕ ಜಿ.ಎಸ್.ವಿ.ಸೀತಾರಾಂ, ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಮತ್ತು ಸಂಕಲನಕಾರ ರವಿಚಂದ್ರನ್ ಉತ್ತಮವಾಗಿ ತಮ್ಮ ಕೆಲಸವನ್ನ ನಿಭಾಯಿಸಿದ್ದಾರೆ.ಒಟ್ಟಿನಲ್ಲಿ  'ಅಪೂರ್ವ' ಚಿತ್ರ ದೃಶ್ಯ ವೈಭವದಿಂದ  ಹೆಚ್ಚು ಗಮನಸೆಳೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

ಮುಂದಿನ ಸುದ್ದಿ
Show comments