Select Your Language

Notifications

webdunia
webdunia
webdunia
webdunia

ಜೊತೆಯಾಗಿರಲು ಫ್ಲಾಟ್ ಖರೀದಿಸುತ್ತಿರುವ ಕೊಹ್ಲಿ ,ಅನುಷ್ಕಾ?

ಜೊತೆಯಾಗಿರಲು ಫ್ಲಾಟ್ ಖರೀದಿಸುತ್ತಿರುವ ಕೊಹ್ಲಿ ,ಅನುಷ್ಕಾ?
ಮುಂಬೈ , ಗುರುವಾರ, 18 ಡಿಸೆಂಬರ್ 2014 (15:58 IST)
ಮೊನ್ನೆ ಮೊನ್ನೆಯಷ್ಟೇ ತಮ್ಮಿಬ್ಬರ ನಡುವಿನ ಪ್ರೇಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದ ಪ್ರಣಯ ಪಕ್ಷಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 
ಅನುಷ್ಕಾ ಮನೆಯ ಹತ್ತಿರದಲ್ಲಿ (ಮುಂಬೈನ ವೆರ್ಸೋವಾ) ಇವರಿಬ್ಬರು  ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ವಿರಾಟ್ ಮುಂಬೈಗೆ ಬಂದ ಸಂದರ್ಭದಲ್ಲಾದರೂ ಜತೆಗೆ ಕಳೆಯಲು ಅನುಕೂಲವಾಗುವಂತೆ ಈ ನಿರ್ಧಾರ ತಳೆಯಲಾಗಿದೆ ಎನ್ನಲಾಗಿದೆ. ಈ ಜೋಡಿಗಳು ಆಗಾಗ ಜತೆಯಲ್ಲಿ ಕಾಣಿಸಿಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿದೆ.
 
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅನುಷ್ಕಾ, ನಾವೇನನ್ನು ಮುಚ್ಚಿಡುತ್ತಿಲ್ಲ.ನಮ್ಮ ಬದುಕನ್ನು ಸಹಜವಾಗಿ ನಡೆಸಲು ನಾವು ಬಯಸುತ್ತೇವೆ. ನಮ್ಮ ಖಾಸಗಿ ವಿಷಯ ಮನರಂಜನೆಗೆ ಆಹಾರವಾಗುವುದು ನಮಗಿಷ್ಟವಿಲ್ಲ ಎಂದಿದ್ದಾರೆ.
 
ಕೆಲ ದಿನಗಳ ಹಿಂದೆ ವಿರಾಟ್ ಮತ್ತು ಅನುಷ್ಕಾ ತಮ್ಮಿಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದರು.
 
ನಾವಿಬ್ಬರನ್ನು ಒಟ್ಟಿಗೆ ಕಂಡಾಕ್ಷಣ ಜನರು ನೀವಿಬ್ಬರು ಇಷ್ಟಪಡುತ್ತಿರುವುದು ನಿಜವೇನು ಎಂದು ಕೇಳುವುದು ಸರಿಯೇ? ನಿಮಗೆ ವಿಷಯ ಗೊತ್ತಿರುವಾಗ ಪದೇ ಪದೇ ಅದರ ಬಗ್ಗೆ ಕೇಳುವುದು ಸಮಂಜಸ ಎನಿಸುವುದಿಲ್ಲ. ನಾವೇನು ಜನರ ಮುಂದೆ ತಪ್ಪು ಮಾಡುತ್ತಿಲ್ಲ ಎಂದು ಕೊಹ್ಲಿ ಮಾಧ್ಯಮದವರಲ್ಲಿ ಹೇಳಿದ್ದರು.
 
ಇದು ನಮ್ಮ ಖಾಸಗಿ ವಿಚಾರ ಆಗಿರುವುದರಿಂದ ಇದರ ಬಗ್ಗೆ ನಾವು ಎಲ್ಲರ ಮುಂದೆ ಹೇಳಬೇಕೆಂದೇನೂ ಇಲ್ಲ. ನಮ್ಮ ಖಾಸಗಿ ವಿಚಾರಗಳನ್ನು ಮಾಧ್ಯಮಗಳು ಮತ್ತು ಜನರು ಗೌರವಿಸಬೇಕು ಎಂದಷ್ಟೇ ಹೇಳಬಯಸುತ್ತೇನೆ ಎಂದಿದ್ದರು ಖ್ಯಾತ ಕ್ರಿಕೆಟಿಗ ವಿರಾಟ್.

Share this Story:

Follow Webdunia kannada