Select Your Language

Notifications

webdunia
webdunia
webdunia
webdunia

ವೈರಲ್ ಆದ ಅನುಷ್ಕಾ ಸ್ನಾನ ಮಾಡುತ್ತಿರುವ ವಿಡಿಯೋ!

ವೈರಲ್ ಆದ ಅನುಷ್ಕಾ ಸ್ನಾನ ಮಾಡುತ್ತಿರುವ ವಿಡಿಯೋ!
ಹೈದರಾಬಾದ್ , ಸೋಮವಾರ, 27 ಏಪ್ರಿಲ್ 2015 (17:50 IST)
ದಕ್ಷಿಣದ ಬಹು ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಸ್ನಾನ ಮಾಡುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಇತ್ತೀಚೆಗೆ ಹನ್ಸಿಕಾಳೆಂದು ಹೇಳಲಾದ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವಿಡಿಯೋ ಒಂದು ಇಂಟರ್ನೆಟ್ ಮತ್ತು ವಾಟ್ಸ್- ಅಪ್‌ಗಳಲ್ಲಿ ಸುತ್ತುತ್ತಿತ್ತು. ತಮ್ಮ ಖಾಸಗಿ ವಿಡಿಯೋ ಪ್ರದರ್ಶಿಸಿದ ಅಂತರ್ಜಾಲದ ವಿರುದ್ಧ ಅನುಷ್ಕಾ ಕಿಡಿ ಕಾರಿದ್ದಾರೆ. 

ಇತರ ವರದಿಗಳ ಪ್ರಕಾರ ಈ ವಿಡಿಯೋದಲ್ಲಿರುವ ಯುವತಿ ನೋಡಲು ಅನುಷ್ಕಾರವರ ತರಹ ಕಾಣುತ್ತಾಳೆ. ಇದನ್ನು ವಯಸ್ಕರ ಸಿನಿಮಾದಿಂದ ಡೌನ್‍ಲೋಡ್ ಮಾಡಲಾಗಿದ್ದು ಕುಚೇಷ್ಟೆ ಸ್ವಭಾವದವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದಾರೆ. 
 
ಸೆಲಬ್ರಿಟಿಗಳ ಫೋಟೋಗಳು ಮತ್ತು ವಿಡಿಯೋಗಳು ಇತ್ತೀಚಿಗೆ ಅಂತರ್ಜಾಲದಲ್ಲಿ ಲೀಕ್ ಆಗುತ್ತಿವೆ. ಇತ್ತೀಚಿಗೆ ಲೀಕ್ ಆದ ಫೋಟೋಗಳೆಂದರೆ ರಾಧಿಕಾ ಆಪ್ಟೆಯವರ ಬೆತ್ತಲೆ ಸೆಲ್ಫಿ, ಪ್ರಿಯಕರನೊಂದಿಗಿರುವ ನಟಿ ವಸುಂಧರಾರವರ ನಗ್ನ ಸೆಲ್ಫಿಗಳು, ತನ್ನ ಪ್ರಿಯಕರನೊಂದಿಗೆ ಲಕ್ಷ್ಮೀ ಮೆನನ್ ಸಲಿಗೆಯಿಂದಿರುವ ವಿಡಿಯೋಗಳು ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿವೆ. 

Share this Story:

Follow Webdunia kannada