Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗಾಗಿ ಸ್ಪೆಶಲ್ ಸ್ಕ್ರೀನಿಂಗ್ ಸಿಧ್ದತೆ ಮಾಡಿರುವ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿಗಾಗಿ ಸ್ಪೆಶಲ್ ಸ್ಕ್ರೀನಿಂಗ್ ಸಿಧ್ದತೆ ಮಾಡಿರುವ ಅನುಷ್ಕಾ ಶರ್ಮಾ
ಮುಂಬೈ , ಗುರುವಾರ, 23 ಜೂನ್ 2016 (16:49 IST)
ಸುಲ್ತಾನ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಗಾಗಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಸರ್‌ಪ್ರೈಜ್ ಆಗಿ ಗಿಫ್ಟ್ ನೀಡಲಿದ್ದಾರಂತೆ. ಕೆಲ ದಿನಗಳಿಂದ ತಮ್ಮ ಭಾವಿ ಪತಿ ವಿರಾಟ್ ಕೊಹ್ಲಿಗೆ ಗಿಫ್ಟ್ ನೀಡಬೇಕು ಎಂದು ಅಂದುಕೊಂಡಿದ್ರಂತೆ. ಅದೀಗ ಕಾಲ ಕೂಡಿ ಬಂದಿದೆಯಂತೆ. ಅನುಶ್ಕಾ ವಿರಾಟ್ ಆಂಡ್ ಟೀಮ್ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ನೀಡುವ ಬಗ್ಗೆ ಪ್ಲ್ಯಾನ್ ಮಾಡಿದ್ದಾರಂತೆ.       

 
ತಮ್ಮ ಸುಲ್ತಾನ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆತಿಥ್ಯ ನೀಡಲು ಅನುಷ್ಕಾ ರೆಡಿ ಮಾಡುತ್ತಿದ್ದಾರಂತೆ. ಟೀಮ್ ಮೇಟ್ಸ್‌ಗೆ ಆಮಂತ್ರಣ ನೀಡಲು ಯೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಪ್ರೋಡೆಕ್ಷನ್ ಜತೆಗೆ ಅನುಷ್ಕಾ ಮಾತನಾಡಿದ್ದಾರೆ. ಆದ್ರೆ ಪ್ರೋಡೆಕ್ಷನ್ ಇದುವರೆಗೂ ಫೈನಲ್ ಮಾಡಿಲ್ವಂತೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಇಬ್ಬರ ನಡುವಿನ ಪ್ರೀತಿ ಮುರಿದು ಬಿದ್ದಿದೆ ಎನ್ನುವ ವರದಿಗಳ ನಡುವೆ, ಇದೀಗ ಕೊಹ್ಲಿ ಮತ್ತು ಅನುಷ್ಕಾ ಸ್ವಚ್ಚಂದ ಹಕ್ಕಿಗಳಂತೆ ಹಾರಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸುತ್ತಿದೆ.
 
ಕೆಲ ದಿನದ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾರಿನಲ್ಲಿ ಕುಳಿತು ಕೆಲ ಕಾಲ ಚಾಟ್ ಮಾಡಿದ ವಿರಾಟ್ ಮತ್ತು ಅನುಷ್ಕಾ, ನಂತರ ಆಕೆ ವಿಮಾನ ನಿಲ್ದಾಣದೊಳಗೆ ತೆರಳುವ ಸಂದರ್ಭದಲ್ಲಿ, ವಿರಾಟ್ ಆಕೆಯನ್ನು ಬಿಗಿದಪ್ಪಿ ಕಿಸ್ ಕೊಟ್ಟಿರುವ ದೃಶ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಿಗೆ ಹರಿಬಿಟ್ಟಿದ್ದರು. ಇದು ಸಾಕಷ್ಟು ಸುದ್ದಿ ಮಾಡಿತ್ತು. 
 
ಇತ್ತೀಚೆಗೆ ನಡೆದ ಅನುಷ್ಕಾ ಶರ್ಮಾರ 28ನೇ ಹುಟ್ಟು ಹಬ್ಬ ಸಂಭ್ರಮಾಚರಣೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿರುವುದು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕೋಲಾಹಲವೆಬ್ಬಿಸಿದ್ದವು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕೃತಿ' ಕಿರುಚಿತ್ರ ಉತ್ತಮವಾದ ಚಿತ್ರ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್