Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ ಮತ್ತು ಸಾರಿಕಾ ಒಟ್ಟಿಗೆ ನಟಿಸುತ್ತಿದ್ದಾರೆ ... ಎಲ್ಲಿ ಗೊತ್ತೇ!

ಅಮಿತಾಬ್ ಬಚ್ಚನ್ ಮತ್ತು ಸಾರಿಕಾ ಒಟ್ಟಿಗೆ ನಟಿಸುತ್ತಿದ್ದಾರೆ  ...  ಎಲ್ಲಿ ಗೊತ್ತೇ!
, ಮಂಗಳವಾರ, 22 ಏಪ್ರಿಲ್ 2014 (09:56 IST)
ಬಾಲಿವುಡ್ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಶ್ರುತಿ ಹಾಸನ್ ತಾಯಿ ಕಮಲ್ ಮಾಜಿ ಪತ್ನಿ ಸಾರಿಕಾ ಒಟ್ಟಾಗಿ ನಟಿಸುತ್ತಿದ್ದಾರ? ಬಾಲಿವುಡ್ ನ ಮಂದಿ ಪ್ರಕಾರ ಹೌದು ಎನ್ನುವ ಉತ್ತರ ಕೇಳಿ ಬರುತ್ತಿದೆ. ಅವರ ಪ್ರಕಾರ ಈ ಜೋಡಿ ಒಟ್ಟಾಗಿ ನಟಿಸಲು ಸಿದ್ಧ ಆಗುತ್ತಿದ್ದಾರೆ. 
 
ಆದರೆ ಬೆಳ್ಳಿತೆರೆಯ ಮೇಲೆ ಅಲ್ಲ ಕಿರುತೆರೆಯಲ್ಲಿ. 30 , 35 ಎಪಿಸೋಡ್ ಗಳ ಒಂದು ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಅವರಿಗೆ ಇಬ್ಬರು ಹೆಂಡತಿಯರು ಇರ್ತಾರಂತೆ. ಮೊದಲ ಪತ್ನಿಯಿಂದ ದೂರ ಆದ ಬಳಿಕ ಅವರು ತಮ್ಮ ಮಗಳನ್ನೇ ಬದುಕಾಗಿ ಮಾಡಿಕೊಂಡು ಜೀವನ ಸಾಗಿಸುತ್ತಾರಂತೆ. 
 
ಆ ಮೊದಲ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಸಾರಿಕಾ. ಈ ಧಾರಾವಾಹಿಯಲ್ಲಿ ಅಮಿತಾಬ್ ಹಣವನ್ನು ಹೂಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಧಾರವಾಹಿ ಪ್ರಸಾರ ಆಗುತ್ತಿದೆ ಎನ್ನುವುದಷ್ಟೇ ಸದ್ಯಕ್ಕೆ ದೊರಕಿರುವ ಸುದ್ದಿ.   

Share this Story:

Follow Webdunia kannada