ಅತ್ಯಂತ ಹೆಸರು ಗಳಿಸಿದ ಚಿತ್ರಗಳಲ್ಲಿ ರಜನಿಕಾಂತ್ ಅವರ ನಟನೆಯ ರೋಬೋ ಸಹ ಸೇರಿದೆ. ಆ ಚಿತ್ರದಲ್ಲಿ ತಂತ್ರಜ್ಞಾನವನ್ನು ತಪ್ಪಾಗಿ ಬಳಕೆ ಮಾಡಿಕೊಂಡರೆ ಆಗುವ ತೊಂದರೆ ಎಂತಹದ್ದು ಎನ್ನುವ ಅಂಶಗಳನ್ನು ಹೊಂದಿದ್ದ ಚಿತ್ರ ರೋಬೋ. ರಜನಿಕಾಂತ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದ ಆ ಚಿತ್ರದಲ್ಲಿ ಐಶ್ವರ್ಯ ರೈ ರಜನಿಯ ಜೋಡಿ ಆಗಿದ್ದರು.
ಆ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದವರು ಶಂಕರ್. ಈಗ ಈ ಚಿತ್ರದ ಎರಡನೇ ಅವತರಣಿಕೆಯನ್ನು ತೆರೆ ಏರಿಸಲು ಸಿದ್ಧತೆ ನಡೆದಿದೆ. ಈ ಚಿತ್ರವೂ ಸಹ ಭಾರೀ ನಿರೀಕ್ಷೆಗಳನ್ನು ಹೊಂದಿದೆ. ಅದೇರೀತಿ ಪಾತ್ರವರ್ಗದ ಆಯ್ಕೆಯನ್ನು ಸಹ ವಿಶೇಷ ಆಸ್ಥೆ ವಹಿಸಿ ಸಿದ್ಧ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಧೂಮ್3 ಮುಖಾಂತರ ತಾವು ಕೇವಲ ನಾಯಕರಾಗಿ ಅಲ್ಲ ಖಳನಾಯಕರಾಗಿ ಸಹ ಪ್ರತಿಭೆ ತೋರಬಲ್ಲೆ ಎಂದು ಸಾಬೀತು ಮಾಡಿರುವ ಆಮೀರ್ ಖಾನ್ ಅವರು ರೋಬೋ 2 ರಲ್ಲಿ ಖಳನಟರಾಗುತ್ತಿದ್ದಾರಂತೆ. ರೋಬೋ2 ರಲ್ಲು ಸಹ ಐಶ್ವರ್ಯ ರೈ ರಾಜನಿಗೆ ಸಾಥ್ ನೀಡ್ತಾ ಇದ್ದಾರಂತೆ.ಇವರೊಂದಿಗೆ ಖಳನಟರಾಗಿ ನಟಿಸಲು ಆಮೀರ್ ಆಸಕ್ತಿ ತೋರುತ್ತಿದ್ದಾರೆ ಅಂಬೋದು ಸಧ್ಯದ ಸುದ್ದಿ!ಮೊದಲ ರೊಬೊದಲ್ಲಿ ಡ್ಯಾನಿ ಖಳನಾಯಕರಾಗಿದ್ದರು.