Webdunia - Bharat's app for daily news and videos

Install App

ಅಮೀರ್ ಖಾನ್ ಅತಿಥಿಗಳನ್ನುಬೀಳ್ಕೊಡುವುದು ಹೇಗೆ ಗೊತ್ತಾ?

Webdunia
ಭಾನುವಾರ, 30 ಅಕ್ಟೋಬರ್ 2016 (09:24 IST)
ನವದೆಹಲಿ:  ಮನೆಗೆ ಬಂದ ಅತಿಥಿ ಎಷ್ಟು ಹೊತ್ತಾದರೂ ಹೋಗುವ ಸೂಚನೆ ಕಾಣದಾದಾಗ ಬಾಲಿವುಡ್ ನಟ ಅಮೀರ್ ಖಾನ್ ಏನು ಮಾಡ್ತಾರೆ ಗೊತ್ತಾ?

ನೇರವಾಗಿ ಹೋಗಿ ಎನ್ನುವಂತಿಲ್ಲ. ಹಾಗಾಗಿ ಅವರು ಇದ್ದಕ್ಕಿದ್ದಂತೆ ಎದ್ದು ನಿಂತು “ಸರಿ. ನಿಮ್ಮನ್ನು ಭೇಟಿಯಾಗಿ ಬಹಳ ಸಂತೋಷವಾಯಿತು” ಎನ್ನುತ್ತಾರಂತೆ. ಇದರ ಅರ್ಥ “ಸಾಕಪ್ಪಾ.. ಇನ್ನು ಮನೆಗೆ ಎದ್ದು ಹೋಗಿ” ಎಂದು.

ಹಾಗಂತ ಸ್ವತಃ ಅಮೀರ್ ಹೇಳಿಕೊಂಡಿದ್ದಾರೆ. ತಮ್ಮ ಸಂಬಂಧಿ ಸಿನಿಮಾ ನಿರ್ಮಾಪಕ ನಾಸಿರ್ ಹುಸೇನ್ ಅವರ ಆತ್ಮಕತೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಅವರಿಗೆ ಈ ಐಡಿಯಾ ಕೊಟ್ಟಿದ್ದು ನಾಸಿರ್ ಅಂಕಲ್ ಅಂತೆ. “ನಾವು ಚಿಕ್ಕವರಿದ್ದಾಗ ಅವರ ಕೊಠಡಿಗೆ ಹೋಗಿ ತಿಂಡಿ ತಿನ್ನುತ್ತಾ ಕೂರುತ್ತಿದ್ದೆವು. ನಾಸಿರ್ ಅಂಕಲ್ ವಿಶ್ರಾಂತಿ ಪಡೆಯಬೇಕೆಂದಿದ್ದರೆ ಎದ್ದು ನಿಂತು ಹೀಗೆಯೇ ಹೇಳುತ್ತಿದ್ದರು. ಅದನ್ನೇ ನಾನು ನನ್ನ ಪತ್ನಿ ನಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದೇವೆ” ಎಂದು ಅಮೀರ್ ಹೇಳಿದ್ದಾರೆ.

ವಿಶೇಷವೆಂದರೆ ಈ ಕಾರ್ಯಕ್ರಮ ಕೊನೆಗೆ ತಮ್ಮ ವಿಮಾನದ ಸಮಯವಾಯಿತು ಎಂದು ಅವರು ಇದೇ ಡೈಲಾಗ್ ಹೇಳಿ ಮತ್ತೊಮ್ಮೆ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ಅಲ್ಲಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments