Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಅಮಲಾ ಪೌಲ್

ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಅಮಲಾ ಪೌಲ್
ಬೆಂಗಳೂರು , ಬುಧವಾರ, 24 ಆಗಸ್ಟ್ 2016 (09:19 IST)
ತಮಿಳಿನಲ್ಲಿ ಧನುಷ್ ಅಭಿನಯಿಸಿರುವ ವೆಲೈ ಇಲ್ಲಾ ಪಟ್ಟಧರಿ ಸಿನಿಮಾ ನಿಮಗೆಲ್ಲಾ ಗೊತ್ತೇ ಇದೆ.ಹಾಗೇ ಇದೇ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ವಿಚಾರಾನೂ ಹೊಸದೇನಲ್ಲ.ಆದ್ರೀಗ ಇದೇ ಸಿನಿಮಾದ ಕುರಿತಾದ ಇಂಟರೆಸ್ಟಿಂಗ್ ವಿಚಾರವೊಂದು ಇದೀಗ ಹೊರ ಬಿದ್ದಿದೆ. ಈ ಸಿನಿಮಾದ ಕನ್ನಡ ರಿಮೇಕ್ ನಲ್ಲಿ ಅಮಲಾ ಪೌಲ್ ಅವರು ಅಭಿನಯಿಸಲಿದ್ದಾರಂತೆ.

 
 ಈ ಹಿಂದೆ ಅವುಲಾ ಅವರು ವೆಲೈ ಇಲ್ಲ ಪಟ್ಟಧರಿ ಸಿನಿಮಾದಲ್ಲಿ ಶಾಲಿನಿ ಅನ್ನೋ ಪಾತ್ರವನ್ನು ನಿರ್ವಹಿಸಿದ್ದರು. ಅದೇ ಪಾತ್ರವನ್ನು ಅಮಲಾ ಅವರ ಕನ್ನಡದಲ್ಲೂ ನಿರ್ವಹಿಸಲಿದ್ದಾರಂತೆ.ಅಂದ್ಹಾಗೆ ಕನ್ನಡದಲ್ಲಿ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಅಭಿನಯಿಸುತ್ತಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅವರೇ ಈ ಸಿನಿಮಾದಲ್ಲಿ ಅಮಲಾ ಪೌಲ್ ಅವರು ಅಭಿನಯಿಸುತ್ತಿರೋದನ್ನು ಖಚಿತಪಡಿಸಿದ್ದಾರೆ.ಅಲ್ಲದೇ ಸಿನಿಮಾದ ಕುರಿತಾದ ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ನಿಮ್ಮ ಮುಂದಿಡುತ್ತೇವೆ ಅಂತಾ ಅವರು ಹೇಳಿದ್ದಾರೆ.

ಸದ್ಯ ಅಮಲಾ ಅವರು ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಹೆಬ್ಬುಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹೆಬ್ಬುಲಿ ಅಮಲಾ ಅಭಿನಯಿಸುತ್ತಿರುವ ಮೊದಲ ಕನ್ನಡ ಸಿನಿಮಾ. ಆ ಸಿನಿಮಾ ರಿಲೀಸ್ ಆಗುವ ಮೊದಲೇ ಅಮಲಾ ಅವರಿಗೆ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಅಮಲಾ ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡ್ರೂ ಅಚ್ಚರಿಯೇನಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಜಗ್ಗೇಶ್ ಅವರ ಟ್ವಿಟರ್ ಹ್ಯಾಕ್ ಮಾಡಿದ ಖದೀಮರು