Webdunia - Bharat's app for daily news and videos

Install App

ಆಲಿಯಾ ಭಟ್- ಸಿದ್ಧಾರ್ಥ್ ಮಲ್ಹೋತ್ರಾ ಆಶಿಕಿ-3ನಲ್ಲಿ ಜತೆಯಾಗಿ ಅಭಿನಯಿಸುತ್ತಿರೋದು ಯಾಕೆ?

Webdunia
ಶನಿವಾರ, 28 ಮೇ 2016 (10:33 IST)
ಬಾಲಿವುಡ್‌ನ ಜೋಡಿ ಹಕ್ಕಿಗಳು ಅಂತಾ ಕರೆಸಿಕೊಳ್ಳುವ ಆಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರು ಈಗಾಗಲೇ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಇದೀಗ ತಮ್ಮ ಮುಂದಿನ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಆಶಿಕಿ-3 ಸಿನಿಮಾದಲ್ಲಿ ಸಿದ್ದಾರ್ಥ್ ಹಾಗೂ ಆಲಿಯಾ ಜೊತೆಯಾಗುತ್ತಿದ್ದಾರೆ.
 ಸಿನಿಮಾ ನಿರ್ಮಾಪಕ ಮುಖೇಶ್ ಭಟ್ ಅವರು ಆಶಿಕಿ-3 ಸಿನಿಮಾ ಮಾಡುತ್ತೇನೆ ಅಂತಾ ಪ್ಲಾನ್ ಮಾಡಿಕೊಂಡಾಗ ಮೊದಲು ಇದರಲ್ಲಿ ಈ ಹಿಂದೆ ಆಶಿಕಿ-2 ಸಿನಿಮಾದಲ್ಲಿ ನಟಿಸಿದ್ದ ಶ್ರದ್ಧಾ ಕಪೂರ್ ಹಾಗೂ ಆದಿತ್ಯಾ ರಾಯ್ ಅವರನ್ನೇ ನಾಯಕ ನಾಯಕಿಯನ್ನಾಗಿಸಬೇಕು ಅಂತಾ ಅಂದುಕೊಂಡಿದ್ರಂತೆ.
 
ಆದ್ರೆ ಅವರಿಬ್ಬರು ಒಕೆ ಜಾನು ಸಿನಿಮಾದಲ್ಲಿ ಅಭಿನಯಿಸುತ್ತಿರೋದರಿಂದ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಸಾಧ್ಯವಿಲ್ಲ ಅಂದ್ರಂತೆ.ಹಾಗಾಗಿ ಸಿದ್ಧಾರ್ಥ್ ಹಾಗೂ ಆಲಿಯಾ ಅವರನ್ನು ಸಂಪರ್ಕಿಸಿದ್ರಂತೆ ಮುಖೇಶ್ ಭಟ್.
 
ಇದೊಂದೇ ಕಾರಣ ಅಲ್ಲ. ಸಿದ್ಧಾರ್ಥ್ ಹಾಗೂ ಆಲಿಯಾ ಭಟ್ ಈ ಹಿಂದೆ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಸ್ಟೂಡೆಂಟ್ ಆಫ್ ದಿ ಇಯರ್ ಹಾಗೂ ಕಪೂರ್ ಆಂಡ್ ಸನ್ಸ್ ಸಿನಿಮಾದಲ್ಲಿ ಈ ಜೋಡಿ ಎಲ್ಲರಿಗೂ ಇಷ್ಟವಾಗಿತ್ತು. ಹಾಗಾಗಿ ಇದೇ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಅಂತಾ ಸಿದ್ಧಾರ್ಥ್ ಹಾಗೂ ಆಲಿಯಾ ಭಟ್ ಅವರನ್ನೇ ಆಯ್ಕೆ ಮಾಡಲಾಯಿತಂತೆ. ಇದು ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿರುವ ಮೂರನೇ ಸಿನಿಮಾ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

93 ದಿನದ ಬಳಿಕ ಜೈಲಿಂದ್ದ ಹೊರಬರುತ್ತಿದ್ದ ಹಾಗೇ ನನ್ನ ಹೋರಾಟ ಜೀವಂತ ಎಂದ ಲಾಯರ್ ಜಗದೀಶ್‌

ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಮುಂದಿನ ಸುದ್ದಿ
Show comments