Select Your Language

Notifications

webdunia
webdunia
webdunia
webdunia

ಶಾಹಿದ್ ಹಾಗೂ ಕರಣ್ ಗೆ ಸರ್‌ಪ್ರೈಸ್ ನೀಡಿದ ಆಲಿಯಾ ಭಟ್

ಶಾಹಿದ್ ಹಾಗೂ ಕರಣ್ ಗೆ ಸರ್‌ಪ್ರೈಸ್ ನೀಡಿದ ಆಲಿಯಾ ಭಟ್
, ಶುಕ್ರವಾರ, 28 ಆಗಸ್ಟ್ 2015 (10:26 IST)
ಇತ್ತೀಚೆಗೆ ನಟ ಶಾಹಿದ್ ಕಪೂರ್ ಹಾಗೂ ಕರಣ್ ಜೋಹರ್ ಝಲಕ್ ದಿಖ್ ಲಾಜಾ ಶೋದಲ್ಲಿ ಭಾಗವಹಿಸಿದ್ರು. ಆದ್ರೆ ಶೋದಲ್ಲಿ ನಟಿ ಆಲಿಯಾ ಭಟ್ ಕರಣ್ ಹಾಗೂ ಶಾಹಿದ್ ಗೆ ದೊಡ್ಡ ಸರ್‌ಪ್ರೈಸ್ ಒಂದನ್ನು ನೀಡಿದ್ರು.

ಆಲಿಯಾ ಕರಣ್ ಹಾಗೂ ಶಾಹಿದ್ ಇಬ್ಬರಿಗೂ ತಾನು ಶೋಗೆ ಬರೋದಾಗಿ ಆಲಿಯಾ ಹೇಳಿರಲಿಲ್ಲ. ಹೇಳದೇ ಸೆಟ್ ಗೆ ಬಂದ ಆಲಿಯಾ ಇಬ್ಬರಿಗೂ ಅಚ್ಚರಿ ಮೂಡಿಸಿದ್ರು.  ಇನ್ನು ಆಲಿಯಾ  ಬಂದಿದ್ದು ಕರಣ್ ಹಾಗೂ ಶಾಹಿದ್ ಇಬ್ಬರಿಗೂ ತುಂಬಾನೇ ಸಂತಸ ಉಂಟು ಮಾಡಿತ್ತು.
 
ಶಾಹಿದ್ ಹಾಗೂ ಆಲಿಯಾ ಶಾಂದಾರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾ ಆಲಿಯಾ ಅಕ್ಕ ಮದುವೆಯ ಕಥಾ ಹಂದರವನ್ನು ಹೊಂದಿದ್ದು, ಶಾಹೀದ್ ಸಿನಿಮಾದಲ್ಲಿ ಮದುವೆಯ ಪ್ಲಾನರ್ ಆಗಿ ಕಾಣಿಸಿಕೊಂಡಿದ್ದಾರೆ. ಶಾಂದಾರ್ ಸಿನಿಮಾವನ್ನು ವಿಕಾಸ್ ಬಹಲ್ ನಿರ್ದೇಶಿಸಿದ್ದು, ಫ್ಯಾಂಟಮ್ ಸಿನಿಮಾ ತಂಡ ಇದರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಅಕ್ಟೋಬರ್ 22 ರಂದು ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

Share this Story:

Follow Webdunia kannada