Select Your Language

Notifications

webdunia
webdunia
webdunia
webdunia

ತಮನ್ನ ಜೊತೆ ಅಕ್ಷಯ್ ಕುಮಾರ್ ಅಫೇರ್? ಹೌದಾ ತಮ್ಮು ??

ತಮನ್ನ ಜೊತೆ ಅಕ್ಷಯ್ ಕುಮಾರ್ ಅಫೇರ್?  ಹೌದಾ ತಮ್ಮು ??
, ಶುಕ್ರವಾರ, 15 ಆಗಸ್ಟ್ 2014 (11:58 IST)
ಬಾಲಿವುಡ್ ನಲ್ಲಿ ಸದ್ಯಕ್ಕೆ ಹೊಸ ಬದುಕು ಕಾಣುತ್ತಿರುವ ನಟಿ ತಮನ್ನ. ಆಕೆಯು ದಕ್ಷಿಣ ಭಾರತ ಸ್ಟಾರ್ ನಟಿಯಾಗಿದ್ಲು  . ಆ ಬಳಿಕ ತನ್ನ ಅದೃಷ್ಟವನ್ನು ಬಾಲಿವುಡ್ ನಲ್ಲಿ ಪರೀಕ್ಷೆ ಮಾಡಿಕೊಳ್ಳುವ ಸಲುವಾಗಿ ಅಲ್ಲಿಗೆ ಹೋದಳು.. ಈಗ ಅನೇಕ ಚಿತ್ರಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾಳೆ ಈ ಚೆಲುವೆ. ಪ್ರಸ್ತುತ ಆಕೆ ನಟನೆಯ ಎಂಟರ್ ಟೈನ್ ಮೆಂಟ್  ಚಿತ್ರವೂ ತೆರೆ ಏರಿದೆ. ಈ ಚಿತ್ರವೂ ಈಗಾಗಲೇ ಸುಮಾರು 50 ಕೋಟಿಗಳಷ್ಟು ಗಳಿಕೆ ಮಾಡಿದೆ.

ಈ ಸಿನಿಮಾದಲ್ಲಿ ತಮನ್ನ ಜೊತೆ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಇವೆಲ್ಲದರ ನಡುವೆ ಈ ಚೆಲುವೆಗೆ ಮತ್ತೊಂದು ಭಾರಿ ಬಜೆಟ್ಚಿತ್ರವೂ  ದೊರೆತಿದೆ. ಆ ಚಿತ್ರಕ್ಕೆ ಸಹಿ ಹಾಕಿದ್ದಾಳಂತೆ   ತಮ್ಮು . ಇವೆಲ್ಲದರ ನಡುವೆ ತಮನ್ನ ಬಾಲಿವುಡ್ ಯುವ ಹೀರೋಗಳ ಜೊತೆ ಡೇಟಿಂಗ್ ಮಾಡ್ತಾ ಇದ್ದಾಳೆ ಎನ್ನುವ ಸುದ್ದಿ ಸಹ ಹರಡಿದ್ದು ಯಾರಜೊತೆ ಎನ್ನುವ ಸ್ಪಷ್ಟನೆ ಬಾಲಿವುಡ್ ಮಂದಿಗೆ ಗೊತ್ತೇ ಆಗಿಲ್ಲ. ಅದರಲ್ಲೂ ಮುಖ್ಯವಾಗಿ ಆಕೆ ಅವರೊಂದಿಗೆ  ಅಫೇರ್  ಇಟ್ಟುಕೊಳ್ಳುವುದರ ವಿಷಯದಲ್ಲೂ ಸಹಿತ ಆಸಕ್ತಿ ತೋರುತ್ತಿದ್ದಾಳೆ ಎನ್ನುವ ಸುದ್ದಿ ಹರಡಿದೆ.
 
ಮುಂದಿನ ಚಿತ್ರದಲ್ಲೂ ನಿನಗೆ ಚಾನ್ಸ್ ಕೊಡ್ತೀನಿ ಅಂತ ಅಕ್ಕಿ ಪ್ರಾಮಿಸ್ ಮಾಡಿದ್ದಾರಂತೆ. ಅದಲ್ಲದೆ   ಈಕೆ ಅಕ್ಷಯ್ ಕುಮಾರ್ ಜೊತೆಗೂ ಸಹಿತ ಹೆಚ್ಚು ಕ್ಲೋಸ್ ಆಗಿದ್ದು, ಆತನ ಜೊತೆಗೂ ಅದೇನೋ ನಡೆಸಿದ್ದಾಳೆ ಎನ್ನುವ ಸುದ್ದಿ ಇದೆ. ಆದರೆ ಆ ಬಗ್ಗೆ ಆಕೆಯನ್ನು ಕೇಳಿದರೆ ಅದಕ್ಕೆ ಬೇಕಾದ ಜಾಣತನದ ಉತ್ತರವನ್ನು ಸಹಿತ ಸಿದ್ಧ ಮಾಡಿಕೊಂಡಿರುತ್ತಾಳೆ ಎನ್ನುವ ಸುದ್ದಿಯು ಸಹ ಬಾಲಿವುಡ್  ನಲ್ಲಿ ಹೆಚ್ಚು ಹರಡಿದೆ. ಈ ವಿಷಯಕ್ಕೆ ಬರುವುದಾದರೆ ಈ ಸಂಗತಿಗೆ ಪೂರಕ ಆಗುವ ಒಂದು ಉದಾಹರಣೆ ಇಲ್ಲಿದೆ. ನೀನು ಅಕ್ಷಯ್  ಕುಮಾರ್ ಅವರ ಜೊತೆ ಅಫೇರ್ ಹೊಂದಿದ್ದೀಯಾ ಎಂದು ಪ್ರಶ್ನಿಸಿದರೆ ಆಕೆ ಆ ಸಂಗತಿ ಅವರನ್ನೇ ಕೇಳಿ ಎಂದು ಉತ್ತರಿಸುತ್ತಾಳಂತೆ. ಎಲ್ಲಿ ಹೋಗ್ತಾಳೆ ತಮ್ಮು.. ಒಂದಲ್ಲ ಒಂದು ದಿನ ತನ್ನ ಬಾಯ್ ಫ್ರೆಂಡ್ ಜೊತೆ ಇರೋದು ನಮ್ಮ ಕಣ್ಣಿಗೆ ಬಿದ್ದೆ ಬೀಳುತ್ತದೆ ಎನ್ನುವ ಸುದ್ದಿ ಹರಡಿದೆ. ಆ ದಿನಕ್ಕಾಗಿ ಅವರು ಜೊತೆಗೆ ನಾವು ಕಾಯ್ತಾ ಇದ್ದಿವಿ!

Share this Story:

Follow Webdunia kannada