Select Your Language

Notifications

webdunia
webdunia
webdunia
webdunia

ಅಕ್ಷಯ್ ಕುಮಾರ್ ನಿಜಕ್ಕೂ ಗ್ರೇಟ್- ನಿಮ್ರತ್ ಕೌರ್

ಅಕ್ಷಯ್ ಕುಮಾರ್ ನಿಜಕ್ಕೂ ಗ್ರೇಟ್- ನಿಮ್ರತ್ ಕೌರ್
, ಶುಕ್ರವಾರ, 28 ಆಗಸ್ಟ್ 2015 (10:21 IST)
ಅಕ್ಷಯ್ ಕುಮಾರ್ ಜೊತೆ ಅಭಿನಯಿಸೋದು ಒಂದು ಉತ್ತಮ ಅನುಭವ ಅಂತಾ ನಟ ನಿಮ್ರಿತ್ ಕೌರ್ ಹೇಳಿದ್ದಾರೆ. ಅಕ್ಕಿ ಒಬ್ಬ ಉತ್ತಮ ವ್ಯಕ್ತಿ ಅಂತ ನಿಮ್ರತ್ ಹೇಳಿದ್ದಾರೆ.

 
ಅಕ್ಷಯ್ ಸೆಟ್‌ನಲ್ಲಿದ್ದರೆ ಸೆಟ್ ತುಂಬಾ ಸಂತೋಷದ ವಾತಾವರಣವಿರುತ್ತದೆ. ಅವರು ಎಲ್ಲರನ್ನು ಸೆಟ್‌ನಲ್ಲಿ ಖುಷಿಯಾಗಿರುವಂತೆ ಮಾಡುತ್ತಾರೆ ಅಂತ ನಿಮ್ರತ್ ಹೇಳಿದ್ದಾರೆ. ನಿಮ್ರತ್ ಅಕ್ಷಯ್ ಕುಮಾರ್ ಜೊತೆ ಏರ್ ಲಿಫ್ಟ್ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 
ಏರ್ ಲಿಫ್ಟ್ ಸಿನಿಮಾ 1990ರಲ್ಲಿ  ಕುವೈತ್‌ನಲ್ಲಿ ನಡೆದ ಗಲ್ಫ್ ಯುದ್ದ ಆಧರಿಸಿದ ಸಿನಿಮಾವಾಗಿದೆ. ಸಿನಿಮಾವನ್ನು  ರಾಜ ಕೃಷ್ಣ ಮೆನನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಿಮ್ರತ್ ಕೌರ್ ನಟಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನವೆಂಬರ್ ತಿಂಗಳಿಂದ ಮತ್ತೆ ಮೂರು ತಿಂಗಳ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

Share this Story:

Follow Webdunia kannada