Select Your Language

Notifications

webdunia
webdunia
webdunia
webdunia

'ರುಸ್ತುಮ್' ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಹಾಡು ಬಿಡುಗಡೆ

'ರುಸ್ತುಮ್' ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಹಾಡು ಬಿಡುಗಡೆ
ಮುಂಬೈ , ಬುಧವಾರ, 20 ಜುಲೈ 2016 (13:42 IST)
ಖಿಲಾಡಿ ಹಿರೋ ಅಕ್ಷಯ್ ಅಭಿನಯದ ಬಹು ನಿರೀಕ್ಷಿತ  'ರುಸ್ತುಮ್' ಚಿತ್ರದ ಮತ್ತೊಂದು  ರೋಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಹಾಡಿನಲ್ಲಿ ಅಕ್ಕಿ ಹಾಗೂ ಇಲಿಯಾನ್ ರೋಮ್ಯಾನ್ಸ್ ಮಾಡುವುದರ ಮೂಲಕ ಮೋಡಿ ಮಾಡಲಿದ್ದಾರೆ. ಅಕ್ಷಯ್‌ಗೆ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ವಿಶೇಷ ಪಾತ್ರದಲ್ಲಿ ಅಕ್ಕಿ ಕಾಣಿಸಿಕೊಳ್ಳುತ್ತಿದ್ದು, ಈಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಾಡುಗಳು ಸಖತ್ ಹವಾ ಮೂಡಿಸುತ್ತಿವೆ. 
ಚಿತ್ರದ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದು, ಅಭಿಮಾನಿಗಳಿಗೆ ಸರ್‌ಪ್ರೈಜ್ ನೀಡಲು ಚಿತ್ರತಂಡ ಮತ್ತೊಂದು ರೋಮ್ಯಾಂಟಿಕ್ ಸಾಂಗ್‌ನ್ನು ಬಿಡುಗಡೆಗೊಳಿಸಿದೆ. ಈ ಸಾಂಗ್‌ನ್ನು ಮ್ಯೂಸಿಕ್ ಕಂಪೋಸ್ ಮಾಡಿರುವ ಅಂಕಿತ ತಿವಾರಿ ಧ್ವನಿ ನೀಡಿದ್ದಾರೆ. 
 
ಚಿತ್ರದಲ್ಲಿ ಫಸ್ಟ್ ಸೈಟ್‌ಗೆ ಇಲಿಯಾನಾ ಪ್ರೀತಿಯ ಬಲೆಗೆ ಬೀಳುವ ನಾಯಕ ನಟ ಅಕ್ಷಯ್, ತಮ್ಮದೇ ಆದ  ಪ್ರೀತಿ ವ್ಯಕ್ತಪಡಿಸುತ್ತಾರೆ. ಮದುವೆಯಾಗುವಂತೆ ಪ್ರಪೋಸ್ ಮಾಡುತ್ತಾರಂತೆ.
 
ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಸಖತ್ ಹ್ಯಾಂಡ್‌ಸಮ್ ಆಗಿ ಮಿಂಚಿರುವ ಅಕ್ಕಿ ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಈ ಹಿಂದೆ ತಮ್ಮ ಪಾತ್ರದ ಬಗ್ಗೆ ಟ್ವಿಟ್ ಮಾಡಿದ್ದರು. ರುಸ್ತುಮ್ ಚಿತ್ರ ಅಗಸ್ಟ್ 12ರಂದು ಬಿಡುಗಡೆಯಾಗಲಿದೆ.ಅಧಿಕಾರಿ ಪಾತ್ರದಲ್ಲಿ ಅಕ್ಷಯ್‌‌ರನ್ನು ನೋಡಲು ಅವರ ಅಭಿಮಾನಿಗಳ ಕಾತುರದಲ್ಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಪಡುಕೋಣೆ ಜತೆಗೆ ಶಾಹಿದ್ ಕಪೂರ್ ರೋಮ್ಯಾನ್ಸ್?