Webdunia - Bharat's app for daily news and videos

Install App

ಮತ್ತೆ ಒಂದಾಗ್ತಿದೆ ಲೂಸಿಯಾ ಜೋಡಿ

Webdunia
ಮಂಗಳವಾರ, 16 ಫೆಬ್ರವರಿ 2016 (20:33 IST)
ಲೂಸಿಯಾ ಸಿನಿಮಾ ನೋಡಿದ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನಿಗೆ ಆ ಸಿನಿಮಾದಲ್ಲಿ ಶೃತಿ ಹಾಗೂ ನೀನಾಸಂ ಸತೀಶ್ ಜೋಡಿಯನ್ನು ಮರೆಯೋದಕ್ಕೆ ಸಾಧ್ಯನೇ ಇಲ್ಲ. ಲೂಸಿಯಾ ಸಿನಿಮಾ ನೋಡಿದ ಅಭಿಮಾನಿಗಳು ಈ ಜೋಡಿ ಮತ್ತೆ ತೆರೆ ಮೇಲೆ ಒಂದಾದ್ರೆ ಚೆನ್ನಾಗಿರುತ್ತೆ ಅಂತಾ ಲೆಕ್ಕಾಚಾರದಲ್ಲಿದ್ರು. ಆದ್ರೀಗ ಆ ಲೆಕ್ಕಾಚಾರ ಸರಿಯಾಗಿದೆ.
 
ಇದೀಗ ಮತ್ತೊಂದು ಕನ್ನಡ ಸಿನಿಮಾದಲ್ಲೂ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೊತೆಯಾಗಿ ಅಭಿನಯಿಸಲು ರೆಡಿಯಾಗಿದ್ದಾರೆ. ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ  ಒಲವೇ ಮಂದಾರ,ಬುಲೆಟ್ ಬಸ್ಯಾ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಜಯತೀರ್ಥ ಲೂಸಿಯಾ ಜೋಡಿಯನ್ನು ಮತ್ತೆ ಒಂದು ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಬ್ಯೂಟಿಫುಲ್ ಮನಸ್ಸುಗಳು ಅಂತಾ ಹೆಸರಿಡಲಾಗಿದೆ.ಇನ್ನು ಶೃತಿ ಹಾಗೂ ನೀನಾಸಂ  ಸತೀಶ್ ಎರಡನೇ ಬಾರಿ ಜೊತೆಯಾಗಿ ಅಭಿನಯಿಸುತ್ತಿರುವ ಈ ಸಿನಿಮಾ ಖಂಡಿತವಾಗಿಯೂ ಯಶಸ್ಸು ಕಾಣುತ್ತೆ ಅನ್ನೋ ನಿರ್ದೇಶಕ ಜಯತೀರ್ಥ ಅವರು ಹೇಳಿದ್ದಾರೆ.
 
ಇನ್ನು ಸಿನಿಮಾ ನಟಿ ಶೃತಿ ಹರಿಹರನ್ ಅವರದ್ದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗಿಯ ಪಾತ್ರವಂತೆ.ಅಲ್ಲದೇ ತುಂಬಾ ಸಿಂಪಲ್ ಹುಡುಗಿಯ ಪಾತ್ರವನ್ನು ಶೃತಿ ಅವರು ನಿರ್ವಹಿಸಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆಯಂತೆ.ಅಲ್ಲದೇ ಕನ್ನಡದಲ್ಲಿ ಇದೊಂದು ವಿಭಿನ್ನ ಸಿನಿಮಾ ಅಂತಾ ಅವರು ಹೇಳಿದ್ದಾರೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments