Webdunia - Bharat's app for daily news and videos

Install App

'ಅಮೀರ್ ಖಾನ್ ಸಹೋದರಿ' ಎಂದು ಹೇಳಿರುವುದಕ್ಕೆ ಹೆಮ್ಮೆ ಇದೆ: ಪ್ರಿಯಾಮಣಿ

Webdunia
ಬುಧವಾರ, 11 ಮೇ 2016 (13:54 IST)
ನನ್ನನ್ನು 'ಅಮೀರ್ ಖಾನ್  ಸಹೋದರಿ 'ಎಂದು ಹೇಳಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ ಎಂದು ನಟಿ ಪ್ರಿಯಾಮಣಿ ಹೇಳಿಕೆ ನೀಡಿದ್ದಾರೆ.  ಕಳೆದ ತಿಂಗಳು 28ರಂದು ಕೇರಳದಲ್ಲಿ ಜಿಶಾ ಎಂಬ ಯುವತಿ ಮೇಲೆ ದಲಿತ ಯುವಕನಿಂದ ಬರ್ಬರವಾಗಿ ರೇಪ್ ಆಗಿತ್ತು. ಇದು ಇಡೀ ದೇಶದಲ್ಲೆ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಸಿನಿಮಾ ಜಗತ್ತಿನ ಕೆಲ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದರು.

ಸೌತ್ ಇಂಡಿಯನ್ ಫಿಲ್ಮಂ ಆ್ಯಕ್ಟರ್ ಪ್ರಿಯಾಮಣಿ ತುಂಬಾ ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು... ಈ ಬಗ್ಗೆ ಟ್ವಿಟ್‌ ಮಾಡಿದ್ದ ಪ್ರಿಯಾಮಣಿ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಹುಡುಗಿಯರು ದೇಶ ಬೀಡಬೇಕಾಗುತ್ತದೆ  ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಹಲವೆಡೆ ಆಕ್ಷೇಪಗಳು ಕೇಳಿ ಬಂದಿದ್ದವು. ಟ್ವಿಟರ್ ಬಳಕೆದಾರರು  ಪ್ರಿಯಾಮಣಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರ ವಿರೋಧಿ ಹಾಗೂ ಅಮೀರ್ ಖಾನ್ ಸಹೋದರಿ ಎಂದು ಆಕೆಯನ್ನು ಕರೆಯಲಾಗಿತ್ತು. ಇದಾದ ಬಳಿಕ ಪ್ರಿಯಾಮಣಿ ತಮ್ಮ ಹೇಳಿಕೆ ಬಗ್ಗೆ ಹಲವು ವಿರೋಧಗಳನ್ನು ಎದುರಿಸಬೇಕಾಯ್ತು.

ವರದಿ ಪ್ರಕಾರ 'ಅಮೀರ್ ಖಾನ್ ಸಹೋದರಿ' ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅವರು, ನನನ್ನು 'ಅಮಿರ್ ಖಾನ್ ಸಹೋದರಿ' ಎಂದು ಹೇಳಿದಕ್ಕಾಗಿ ತುಂಬಾ ಹೆಮ್ಮೆಯಿದೆ ಎಂದು ಹೇಳಿಕೆ ನೀಡಿದ್ದಾರೆ. 
 
ವೆಬ್‌ಸೈಟ್‌ ಜತೆಗೆ ಮಾತನಾಡಿರುವ ಪ್ರಿಯಾಮಣಿ, 'ನಾನು ಮಾಡಿರುವ ಟ್ವೀಟ್ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ. ನಾನು ಸಮಾಜದ ನ್ಯೂನತೆಗಳನ್ನು ಹೊರತರುವುದಕ್ಕಾಗಿ ಈ ರೀತಿ ಟ್ವಿಟ್ ಮಾಡಿದ್ದೇನೆ'. ಪ್ರಿಯಾಮಣಿ ಹೇಳುವಂತೆ.. 'ದೇಶದಲ್ಲಿ ಪ್ರತಿಯೊಬ್ಬ ಹುಡುಗಿಗೂ ತನ್ನ ಅಭಿಪ್ರಾಯ ಹೇಳುವ ಹಕ್ಕಿದೆ. ಆದ್ದರಿಂದ ನನಗೆ ಹೆಮ್ಮೆ ಇದೆ ನನ್ನನ್ನು 'ಅಮೀರ್ ಖಾನ್ ಸಹೋದರಿ' ಎಂದು ಕರೆದಿರುವುದಕ್ಕೆ', 'ಅಮೀರ್ ಖಾನ್ ಎಂಬ ಮಹಾನ ವ್ಯಕ್ತಿಯ ಸಹೋದರಿ' ಎನ್ನುವುದಕ್ಕೆ ನಿಜಕ್ಕೂ ಹೆಮ್ಮೆ ಇದೆ ಎಂದಿದ್ದಾರೆ. 
 
ಇನ್ನೂ ಪ್ರಿಯಾಮಣಿ ಶಾರೂಖ್ ಖಾನ್ ಜತೆಗೆ ಚೈನ್ನೈ ಎಕ್ಸ್‌ಪ್ರೆಸ್ ಹಾಗೂ ಅಭಿಷೇಕ್ ಬಚ್ಚನ್ ಜತೆ ರಾವಣ್ ಚಿತ್ರಗಳಲ್ಲಿ ನಟಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments