ಕನ್ನಡಿಗರನ್ನು ರಂಜಿಸಲು ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ನಟಿ ಮುವೈತ್ ಖಾನ್

Webdunia
ಮಂಗಳವಾರ, 18 ಸೆಪ್ಟಂಬರ್ 2018 (09:05 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ 'ರಾಜಧಾನಿ','ಒರಟ-ಐ ಲವ್ ಯೂ' ಸೇರಿದಂತೆ ಹಲವಾರು ಚಿತ್ರಗಳ ವಿಶೇಷ ಹಾಡಿನಲ್ಲಿ ನರ್ತಿಸಿದ ನಟಿ ಮುವೈತ್ ಖಾನ್ ಹಲವಾರು ವರ್ಷಗಳ ನಂತರ ಮತ್ತೆಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.


ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಮುಮೈತ್ ಖಾನ್, ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಇವರು ಈಗಾಗಲೇ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯಾಗಿದ್ದಾರೆ. ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಇವರು ತೆಲುಗು ಬಿಗ್ ಬಾಸ್ ನ ಮೊದಲ ಸೀಜನ್ ಸ್ಪರ್ಧಿಯಾಗಿದ್ದರು.


ಈಗಾಗಲೇ ದಂಡುಪಾಳ್ಯ ಹೆಸರಿನ ಸರಣಿಗಳು ಮೂರು ಭಾಗಗಳಲ್ಲಿ ಬಂದಿವೆ. ಇದೀಗ ಮುವೈತ್ ಖಾನ್ ಅವರು  ಕೆ. ಟಿ ನಾಯಕ್ ನಿರ್ದೇಶನದ 'ದಂಡುಪಾಳ್ಯ -4' ಚಿತ್ರದ ವಿಶೇಷ ಹಾಡಿನಲ್ಲಿ ನರ್ತಿಸುತ್ತಿದ್ದಾರೆ. ಸುಮನ್ ರಂಗನಾಥ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ