Select Your Language

Notifications

webdunia
webdunia
webdunia
webdunia

ಏಳು ವರ್ಷಗಳ ಬಳಿಕ ಅಭಿಷೇಕ್, ಐಶ್ವರ್ಯಾ ಜೋಡಿ?

ಏಳು ವರ್ಷಗಳ ಬಳಿಕ ಅಭಿಷೇಕ್, ಐಶ್ವರ್ಯಾ ಜೋಡಿ?
Mumbai , ಮಂಗಳವಾರ, 28 ಫೆಬ್ರವರಿ 2017 (22:48 IST)
ಬಾಲಿವುಡ್‌ನ ಬ್ಯೂಟಿಫುಲ್ ಜೋಡಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತೆ ಜತೆಯಾಗಿ ಅಭಿನಯಿಸಲು ಸಿದ್ಧರಾಗಿದ್ದಾರೆ. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನೇತೃತ್ವದ ಫಾಂಟಮ್ ಫಿಲಂಸ್ ಇವರಿಬ್ಬರ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಬಿ-ಟೌನ್‍ನಲ್ಲಿ ಗುಸುಗುಸು ಕೇಳಿಬರುತ್ತಿದೆ.
 
ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಐಶ್ ಮತ್ತು ಅಭಿ ಏಳು ವರ್ಷಗಳ ಬಳಿಕ ಜತೆಯಾಗಿ ಅಭಿನಯಿಸುತ್ತಿರುವ ಚಿತ್ರವಾಗಲಿದೆ. ಈ ಚಿತ್ರಕ್ಕೆ ’ಗುಲಾಬ್ ಜಾಮೂನ್’ ಎಂದು ಹೆಸರಿಡಲಾಗಿದೆಯಂತೆ. ಇತ್ತೀಚೆಗೆ ರಾವಣ್ ಚಿತ್ರದ ಸೆಟ್‌ನಲ್ಲಿ ಐಶ್ವರ್ಯಾ ಜತೆಗಿನ ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಅಭಿಷೇಕ್ ಪೋಸ್ಟ್ ಮಾಡಿದ್ದಾರೆ.
 
ಹಾಗಾಗಿ ಇವರಿಬ್ಬರೂ ಮತ್ತೆ ಅಭಿನಯಿಸಲಿದ್ದಾರೆ ಎಂದು ಅಭಿಮಾನಿಗಳು ಕನವರಿಸುವಂತಾಗಿದೆ. ಏಳು ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್‌ನಲ್ಲಿ ಬಂದ ರಾವಣ್ (2008) ಚಿತ್ರದಲ್ಲಿ ಐಶ್ ಮತ್ತು ಅಭಿ ಅಭಿನಯಿಸಿದ್ದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಲಯಕ್ಕೆ ಹಾಜರಾದ ತಮಿಳು ನಟ ಧನುಷ್