Webdunia - Bharat's app for daily news and videos

Install App

ಫೇಸ್‌ಬುಕ್‍ನಲ್ಲಿ ’ದಂಗಲ್’ ಫುಲ್ ಮೂವಿ ಲೀಕ್!

Webdunia
ಭಾನುವಾರ, 25 ಡಿಸೆಂಬರ್ 2016 (07:03 IST)
ಅಮೀರ್ ಖಾನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ದಂಗಲ್. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಂತ ಚಿತ್ರವೂ ಹೌದು. ಪೈರಸಿ ಎನ್ನುವುದು ಈವತ್ತು ನಾನಾ ರೂಪಗಳಲ್ಲಿ ಚಿತ್ರರಂಗವನ್ನು ಕಾಡುತ್ತಿದೆ. ಬಹುಶಃ ಇದೇ ಮೊದಲ ಸಲ ಅನ್ನಿಸುತ್ತದೆ, ’ಫೇಸ್‌ಬುಕ್’ ಬಳಸಿಕೊಂಡು ದಂಗಲ್ ಕಂಪ್ಲೀಟ್ ಚಿತ್ರವನ್ನು ಲೀಕ್ ಮಾಡಿದ್ದಾನೆ ವ್ಯಕ್ತಿಯೊಬ್ಬ.
 
ಇಷ್ಟು ದಿನಗಳ ಕಾಲ ಪೈರಸಿ ಮಾಡುವವರು ಯೂಟ್ಯೂಬ್ ಬಳಸಿಕೊಳ್ಳುತ್ತಿದ್ದರು. ಆದರೆ ಅಲ್ಲಿ ಅಪ್‍ಲೋಡ್ ಆಗುತ್ತಿದ್ದಂತೆ ಯೂಟ್ಯೂಬ್ ಗಮನಕ್ಕೆ ತಂದು ಡಿಲೀಟ್ ಮಾಡಿಸಲಾಗುತ್ತಿತ್ತು. ಈ ಸಲ ಫೇಸ್‌ಬುಕ್ ಬಳಸಿಕೊಂಡು ಲೀಕ್ ಮಾಡಿದ್ದಾರೆ.
 
ದುಬೈ ಮೂಲದ ಹಸ್ಮಿ ಎನ್ನೋ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ದಂಗಲ್ ಲೀಕ್ ಆಗಿದೆ. ಸಂಪೂರ್ಣ ಚಿತ್ರವನ್ನು ಲೀಕ್ ಮಾಡಲಾಗಿದ್ದು, ಪೋಸ್ಟ್ ಮಾಡಿದ 14 ಗಂಟೆಗಳಲ್ಲೇ 8,33,000 ಮಂದಿ ವೀಕ್ಷಿಸಿದ್ದಾರೆ. ಕಾಪಿರೈಟ್ ಕಾರಣದಿಂದ ಆ ವಿಡಿಯೋ ಡಿಲೀಟ್ ಮಾಡಲಾಗಿದೆ.
 
ಸಾಕ್ಷಿ ತನ್ವರ್, ಫಾತಿಮಾ ಸನಾ ಶೇಕ್, ಸನ್ಯಾ ಮಲ್ಹೋತ್ರಾ, ಅಪರ್‌ಶಕ್ತಿ ಖುರಾನಾ, ವಿವನ್ ಭಟೇನಾ ಚಿ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಪ್ರೀತಮ್ ಚಕ್ರವರ್ತಿ ಸಂಗೀತ ಇದೆ. ಬಾಕ್ಸಾಫೀಸಲ್ಲಿ ಮೊದಲ ದಿನವೇ ರೂ.30 ಕೋಟಿ ಬಾಚಿದೆ ದಂಗಲ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments