Select Your Language

Notifications

webdunia
webdunia
webdunia
webdunia

ಮಕ್ಕಳ ದಿನಾಚರಣೆ ದಿನದಂದು ಅಮೀರ್ ಖಾನ್ ಹಾಡು ಬಿಡುಗಡೆ

ಮಕ್ಕಳ ದಿನಾಚರಣೆ ದಿನದಂದು ಅಮೀರ್ ಖಾನ್ ಹಾಡು ಬಿಡುಗಡೆ
Mumbai , ಶುಕ್ರವಾರ, 11 ನವೆಂಬರ್ 2016 (14:20 IST)
ಮುಂಬೈ: ಮಕ್ಕಳ ದಿನಾಚರಣೆ ದಿನವಾದ ನವಂಬರ್ 14 ರಂದು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರದ ಹಾಡೊಂದು ಬಿಡುಗಡೆಯಾಗಲಿದೆ.

“ಬಾಪ್ ತೂ..” ಎಂದು ಪ್ರಾರಂಭವಾಗುವ ಈ ಹಾಡು ಲೋಕಾರ್ಪಣೆಯಾಗಲಿದೆ. ದಂಗಲ್ ಕುಸ್ತಿ ಪಟುಗಳ ಕುರಿತಾದ ಚಿತ್ರವಾಗಿದ್ದು, ಅಮೀರ್ ಖಾನ್ ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳ ತಂದೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಈಗಾಗಲೇ ಇದರ ಟೀಸರ್ ಬಿಡುಗಡೆಯಾಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.  ಮಕ್ಕಳು ಅಪ್ಪನ ಬಗ್ಗೆ ಹೇಳುವ ಹಾಡು ಇದಾಗಿರುವುದರಿಂದ ಮಕ್ಕಳ ದಿನಾಚರಣೆ ದಿನವೇ ಇದನ್ನು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಅಮಿತ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದು, ಪ್ರೀತಂ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ವಿತ್ ಕರಣ್ ಶೋನಲ್ಲಿ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಹಾಲಿ ಪ್ರೇಮಿ