ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೋಲಿವುಡ್, ಬಾಲಿವುಡ್ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಇನ್ನು ಬಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಿರುವ ರಜನಿಗೆ ಅಮಿತಾಬ್ ಬಚ್ಚನ್, ಅಮೀರ್ ಖಾನ್, ಶಾರುಖ್ ಖಾನ್ ಜೊತೆಗೂ ಒಳ್ಳೇಯ ಸ್ನೇಹಸಂಬಂಧ ಇದೆ.
ಇತ್ತೀಚೆಗೆ ರಜನಿ ಮುಂದೆ ಅಮೀರ್ ಖಾನ್ ಒಂದು ಕೋರಿಕೆ ಇಟ್ಟಿದ್ದಾರೆ. ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ಇದೇ ಕ್ರಿಸ್ಮಸ್ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದ ವಿಶೇಷ ಪ್ರದರ್ಶನವನ್ನು ರಜನಿ ಕುಟುಂಬಕ್ಕೆ ಏರ್ಪಡಿಸಿದ್ದಾರೆ ಅಮೀರ್.
ಇದೇ ಸಂದರ್ಭದಲ್ಲಿ ರಜನಿಗೆ ಅಮೀರ್ ಖಾನ್ ಒಂದು ವಿನಂತಿಯನ್ನೂ ಮಾಡಲಿದ್ದಾರೆ. ದಂಗಲ್ ಚಿತ್ರದಲ್ಲಿ ಅಮೀರ್ ಪೋಷಿಸಿರುವ ಪಾತ್ರಕ್ಕೆ ತಮಿಳಿನಲ್ಲಿ ರಜನಿ ಡಬ್ಬಿಂಗ್ ಹೇಳಬೇಕೆಂಬುದು ಆ ವಿನಂತಿ. ಆದರೆ ರಜನಿಕಾಂತ್ ಈ ಬಗ್ಗೆ ಇನ್ನೂ ಏನೂ ಹೇಳಿಲ್ಲ.
ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಪಾತ್ರ ಯುವಕನಿಂದ ಮುದುಕನಾಗುವವರೆಗೂ ಸಾಗುತ್ತೆ. ಇದರಲ್ಲಿ ಅವರು ಸಾಕಷ್ಟು ತಯಾರಿ ಮಾಡಿಕೊಂಡು ಅದ್ಭುತವಾಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೆ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ ಇದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.