Select Your Language

Notifications

webdunia
webdunia
webdunia
webdunia

ಸಲ್ಮಾನ್‌‌ ನನ್ನ ತರಹ ಪ್ಯಾಂಟ್‌‌‌ ಕೆಳಗಿಳಿಸಲಿ: ಅಮಿರ್ ಖಾನ್‌

ಸಲ್ಮಾನ್‌‌ ನನ್ನ ತರಹ ಪ್ಯಾಂಟ್‌‌‌ ಕೆಳಗಿಳಿಸಲಿ: ಅಮಿರ್ ಖಾನ್‌

Arunkumar

ಮುಂಬೈ , ಶುಕ್ರವಾರ, 22 ಆಗಸ್ಟ್ 2014 (19:44 IST)
ಈಗಾಗಲೆ ಅಮಿರ್‌ಖಾನ್‌ರ 'ಪಿಕೆ' ಚಿತ್ರದ ಪೋಸ್ಟರ್‌‌‌ ಬದಲಾಗಿದೆ, ಆದರೆ ಜನರು ಈಗಲೂ ಕೂಡ ಮೊದಲಿನ ಪೋಸ್ಟರ್‌‌‌‌‌ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲಿನ ನ್ಯೂಡ್‌ ಪೋಸ್ಟರ್‌‌  ಕುರಿತು ಪತ್ರಕರ್ತರ ಪ್ರಶ್ನೆಗಳು ಕೂಡ ನಿಂತಿಲ್ಲ. ಇದಕ್ಕಾಗಿ ಎರಡನೇ ಪೋಸ್ಟರ್‌‌ ಬಿಡುಗಡೆ ಸಮಯದಲ್ಲಿ ಪತ್ರಕರ್ತರು ಮೊದಲಿನ ಪೋಸ್ಟರ್‌‌‌ಬಗ್ಗೆ ಅಮಿರ್‌ ಖಾನ್‌‌‌‌ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. 
 
ಪತ್ರಕರ್ತರೊಂದಿಗೆ ನಡೆದ ಸಂವಾದ ಸಲ್ಮಾನ್‌ ಖಾನ್‌‌ ಕಡೆಗೆ ತಿರುಗಿತು. ಅಮಿರ್‌ ಯಾವ ಮೂಡ್‌ನಲ್ಲಿದ್ದರೋ ಗೊತ್ತಿಲ್ಲ.  'ಧೂಮ್‌‌‌‌ 3' ಸಮಯದಲ್ಲಿ ಸಲ್ಮಾನ್‌ ಬಿಗ್‌ ಬಾಸ್‌‌‌‌‌ನಲ್ಲಿ ನನ್ನ 'ಧೂಮ್‌‌‌ 3' ಕ್ಯಾಪ್‌ ಹಾಕಿಕೊಂಡು ಬಹಳಷ್ಟು ಪ್ರಚಾರ ಮಾಡಿದರು. ಈಗ ಅವರ ಗೆಳೆತನದ ಪರೀಕ್ಷೆ ಇದೆ. ಸಲ್ಮಾನ್‌‌‌ ಪ್ರತಿ ಸಿನೆಮಾದಲ್ಲಿ ಶರ್ಟ್‌‌ ಬಿಚ್ಚಿಕೊಳ್ಳುತ್ತಾರೆ, ಈಗ ಪ್ಯಾಂಟ್‌‌ ಬಿಚ್ಚುತ್ತಾರಾ? ಎಂದು ಅಮಿರ್‌ ಖಾನ್‌ ಆತ್ಮಿಯ ಮಿತ್ರ ಸಲ್ಮಾನ್‌ ಖಾನ್‌‌ಗೆ ಸವಾಲು ಹಾಕಿದ್ದಾರೆ. 
 
ಅಮಿರ್‌ ಖಾನ್‌ ಅಂತು ಸವಾಲು ಹಾಕಿದ್ದಾರೆ. ಚೆಂಡು ಈ ಸಲ್ಮಾನ್‌‌ ಖಾನ್‌‌ರ ಕೋರ್ಟ್‌‌‌ನಲ್ಲಿದೆ. ಈಗ ದಬಂಗ್‌ ಸ್ಟಾರ್‌‌‌ ಸಲ್ಮಾನ್‌ ಈ ಚೆಂಡಿಗೆ ಯಾವ ರೀತಿ ಕಿಕ್‌ ಹೊಡೆಯುತ್ತಾರೊ ಎಂದು ಕಾದು ನೋಡಬೇಕು. 

Share this Story:

Follow Webdunia kannada