Select Your Language

Notifications

webdunia
webdunia
webdunia
webdunia

ಕಾಮಿಡಿ ಕಪಿಲ್ ಸಿನಿಮಾದಲ್ಲಿ ವಿಲನ್ ಆದ ಅರ್ಬಾಸ್ ಖಾನ್

ಕಾಮಿಡಿ ಕಪಿಲ್ ಸಿನಿಮಾದಲ್ಲಿ  ವಿಲನ್ ಆದ ಅರ್ಬಾಸ್ ಖಾನ್
ಮುಂಬೈ , ಗುರುವಾರ, 30 ಅಕ್ಟೋಬರ್ 2014 (11:58 IST)
ಕಾಮಿಡಿ ವಿತ್ ಕಪಿಲ್ ಎನ್ನುವ ಹಾಸ್ಯ ರಿಯಾಲಿಟಿ ಷೋ ಮೂಲಕ ಜನರ ಪ್ರೀತಿಗೆ ಪಾತ್ರರಾದ ಕಪಿಲ್ ಶರ್ಮ ಅವರ ಅಭಿನಯದ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ತಮ್ಮ ಅರ್ಬಾಜ್ ಖಾನ್ ಅವರು ಖಳನಟನಾಗಿ ಅಭಿನಯಿಸುತ್ತಿದ್ದಾರೆ.

ಈ ಪಾತ್ರಕ್ಕೆ ಅವರ ಕಡೆಯಿಂದ ಸಮ್ಮತಿ ಮುದ್ರೆ  ಸಿಕ್ಕಿದೆ. ಇದು ವೀಕ್ಷಕರಿಗೆ  ಅತಿಯಾದ ಥ್ರಿಲ್  ನೀಡುವಂತಹ ಕಥಾ ಹಂದರ ಹೊಂದಿಲ್ಲ, ಆದರೆ ಆ ಚಿತ್ರದಲ್ಲಿರುವ ಹಾಸ್ಯಭರಿತ ಅಂಶಗಳು ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಚಿತ್ರತಂಡ ಹೇಳಿದೆ. ಇದನ್ನು ಅಬ್ಬಾಸ್ ಅವರು ನಿರ್ದೇಶಿಸುತ್ತಿದ್ದಾರೆ. 
 
ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅರ್ಬಾಸ್ ಅವರ ಜೊತೆ ಮಾತುಕತೆ ಆಗಿದ್ದು, ಚಿತ್ರದ ಕಥೆಯನ್ನು ಅರ್ಬಾಸ್  ಬಳಿ ಚರ್ಚಿಸಿದ್ದಾರಂತೆ ನಿರ್ದೇಶಕರು. ಇದರಲ್ಲಿ ಅರ್ಬಾಸ್ ಡಾನ್ ಪಾತ್ರ ಮಾಡುತ್ತಿದ್ದಾರೆ. ಈ ಮೊದಲು ನಟಿಸಿರುವ ಚಿತ್ರಗಳಿಗಿಂತ ಭಿನ್ನ  ಪಾತ್ರ ತಮಗೆ ಸಿಕ್ಕಿರುವ ಬಗ್ಗೆ ಖುಷಿಯಾಗಿದ್ದಾರೆ ಅರ್ಬಾಸ್. ಭಿನ್ನರೀತಿಯ ಖಳ ಪಾತ್ರ ಆದ ಕಾರಣ ಜನರಿಗೆ ಹೆಚ್ಚು ಆಸಕ್ತಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ ಆ ಚಿತ್ರದ ಮಂದಿ.

ದರಾರ್ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿ ವಿಲನ್ ಪಾತ್ರಧಾರಿ ಆಗಿದ್ದ ಅರ್ಬಾಸ್ ಬಾಲಿವುಡ್ ನಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿ ಸಹೋದರ ಸಲ್ಮಾನ್ ಖಾನ್ ಅವರ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

Share this Story:

Follow Webdunia kannada