Select Your Language

Notifications

webdunia
webdunia
webdunia
webdunia

ರಾಮ್ ಚರಣ್ ವಿದೇಶಿ ಪ್ರಯಾಣದ ಹಿಂದೆ ಅಡಗಿರುವ ರಹಸ್ಯ...

ರಾಮ್ ಚರಣ್ ವಿದೇಶಿ ಪ್ರಯಾಣದ ಹಿಂದೆ ಅಡಗಿರುವ ರಹಸ್ಯ...
ಹೈದರಾಬಾದ್ , ಶನಿವಾರ, 25 ಅಕ್ಟೋಬರ್ 2014 (12:18 IST)
ಇನ್ನು ಎರಡು ತಿಂಗಳುಗಳ ಕಾಲ ತಾನು ಯಾರ ಕೈಗೂ ಸಿಕ್ಕಲ್ಲ, ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ಟಾಲಿವುಡ್ ನಟ ರಾಮ್ ಚರಣ್ ತೇಜಾ ತಿಳಿಸಿದ್ದಾರೆ. ಅವರ ಬಳಿ ನಿರ್ಮಾಪಕರು ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳನ್ನು ಹೇಳುತ್ತಿದ್ದರು ಸಹ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ  ಚರಣ್  ಈಗ ವಿದೇಶಿ ಪ್ರಯಾಣಕ್ಕೆ   ಆದ್ಯತೆ ನೀಡಿದ್ದಾರೆ ಎನ್ನುವ ಸುದ್ದಿ ಇದೆ.   
 
ಅಲ್ಲದೆ ಈಗ ಚರಣ್ ಕೈಲಿ ಯಾವುದೇ ಸಿನಿಮಾ ಇಲ್ಲದೆ ಇರುವುದು ಸಹಿತ ಇಂತಹ ನಿರ್ಧಾರಕ್ಕೆ ಕಾರಣ ಆಗಿದೆ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ವಿದೇಶಿ ಪ್ರವಾಸದಲ್ಲಿ ರಾಮ್ ಜೊತೆ ಆತನ ಪತ್ನಿ ಉಪಾಸನ ಸಹ ಹೋಗುತ್ತಿದ್ದಾರಂತೆ. ಒಟ್ಟಾರೆ ದಂಪತಿಗಳು ವಿದೇಶದಲ್ಲಿ ಹಾಲಿಡೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಆ ಬಳಿಕವಷ್ಟೇ ರಾಮ್ ಚರಣ್ ತನ್ನ ಮುಂದಿನ ಪ್ರಾಜಕ್ಟ್ ಬಗ್ಗೆ ತಿಳಿಸಬಹುದು ಎನ್ನುವ ನಿರೀಕ್ಷೆ ಮಾಡಲಾಗಿದೆ.

ಇದು ನಿಜವೇ ಆಗಿದ್ದಲ್ಲಿ  ತಮ್ಮ ಚಿತ್ರಕ್ಕೆ  ಚರಣ್ ಅವರನ್ನು ಆಯ್ಕೆ ಮಾಡಿಕೊಳ್ಳ ಬೇಕು ಎಂದು ಬಯಸಿರುವ ನಿರ್ದೇಶಕ- ನಿರ್ಮಾಪಕರಿಗೆ ಇದು ಖಂಡಿತ ಶಾಕಿಂಗ್ ನ್ಯೂಸ್ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೂ ಒಂದು ಸ್ಪಷ್ಟ ಸುದ್ದಿ ಸಿಕ್ಕರೆ ನಿರ್ಮಾಪಕ ನಿರ್ದೇಶಕರು ಎರಡು ತಿಂಗಳು ಚೆರ್ರಿ ಮನೆ ಕಡೆಗೆ ಹೋಗುವಷ್ಟಿಲ್ಲ!  

Share this Story:

Follow Webdunia kannada