Select Your Language

Notifications

webdunia
webdunia
webdunia
webdunia

ಎಂಜಲಿನ ಇನ್ನು ಮುಂದೆ ನಟಿಸಲ್ವಂತೆ ...!

ಎಂಜಲಿನ ಇನ್ನು ಮುಂದೆ ನಟಿಸಲ್ವಂತೆ ...!
, ಗುರುವಾರ, 24 ಏಪ್ರಿಲ್ 2014 (18:58 IST)
ಆರು ಮಕ್ಕಳ ತಾಯಿ ನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ಹಾಲಿವುಡ್ ಗ್ಲಾಮರ್ ಸೆಕ್ಸಿ ನಟಿ ಎಂಜಲಿನ ಜೋಲಿ ತನ್ನ ನಟನ ಬದುಕಿಗೆ ಗುಡ್  ಬೈ ಹೇಳುತ್ತಿದ್ದಾರೆ. ಈ ನಿರ್ಧಾರವನ್ನು ಆಕೆ ಎರಡು ವರ್ಷಗಳ ಹಿಂದೆಯೇ ತೆಗೆದುಕೊಂಡಿದ್ದರಾದರು ಈಗ ಅದನ್ನು ಜಗತ್ತಿನ ಮುಂದೆ ಇಡುತ್ತಿದ್ದಾರೆ.ಮಕ್ಕಳ ಲಾಲನೆ ಪಾಲನೆ ಮಾಡುವ ಸಲುವಾಗಿ ಇಂತಹ ನಿರ್ಧಾರವನ್ನು ಆಕೆ ಕೈಗೊಂಡಿದ್ದಾರಂತೆ.

ಈ ನಿರ್ಧಾರ ಕಳೆದ ಎರಡು ವರ್ಷದ ಹಿಂದೆ ತುಂಬಾ ಗಂಭಿರವಾಗಿ ತೆಗೆದುಕೊಂಡಿದ್ದರು ಆ ಬಳಿಕ ಮನಸ್ಸು ಬದಲಾಯಿಸಿ 'ಮೇಲ್ಫಿ ಶೆಂಟ್'  ಅನ್ನುವ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ ಈ ವರ್ಷ ಬಿಡುಗಡೆ ಆಗುತ್ತಿದೆ. 
 
ಹಾಗೆಂದು ಎಂಜಲಿನ ಚಿತ್ರರಂಗದಿಂದ ದೂರ ಆಗಲ್ಲ ನಟಿಸುವ ಬದಲಾಗಿ ನಿರ್ದೇಶನ ಮಾಡುತ್ತಾರೆ. ಅನ್ಬ್ರೆಕನ್ ಅನ್ನುವ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ ಆಕೆ. ಈ ಚಿತ್ರ ಇದೆ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ನಟನೆ ಅನ್ನುವುದು ಒಂದು ವರ.

ಆ ವರವನ್ನು ಸದ್ವಿನಿಯೋಗ ಮಾಡಿಕೊಂಡಿದ್ದೇನೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ. ಒಟ್ಟಾರೆ ಅವರ ಅಭಿಮಾನಿಗಳಿಗೆ, ಸೌಂದರ್ಯೋ ಪಾಸಕರಿಗೆ ಮಾತ್ರ ಇದು ಬೇಸರದ ಸಂಗತಿ . 

Share this Story:

Follow Webdunia kannada