Webdunia - Bharat's app for daily news and videos

Install App

ಹೃತಿಕ್ ಮತ್ತು ಸುಸಾನ ವಿಚ್ಛೇದನಕ್ಕೆ ಕಾರಣ ನಾನಲ್ಲ-ಅರ್ಜುನ್ ರಾಂ ಪಾಲ್

Webdunia
ಬುಧವಾರ, 18 ಡಿಸೆಂಬರ್ 2013 (11:36 IST)
PR
ಹೃತಿಕ್ ಮತ್ತು ಸುಸಾನ ವಿಚ್ಛೇದನಕ್ಕೆ ನಾನು ಕಾರಣವಲ್ಲ ಎಂದಿದ್ದಾರೆ ಅರ್ಜುನ್ ರಾಂಪಾಲ್.ಸುಸಾನ ಮತ್ತು ಹೃತಿಕ್ ರೋಶನ್ ವಿಚ್ಛೇದನದ ಸಂಗತಿಯಿಂದ ತನಗೆ ತುಂಬಾ ಬೇಸರವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿ ಮನಕ್ಕೆ ಹೆಚ್ಚು ಖೇದ ಉಂಟು ಮಾಡಿದೆ ಎಂದು ಹೇಳಿದ್ದಾರೆ ನಟ, ನಿರ್ದೇಶಕ ಅರ್ಜುನ್ ರಾಂ ಪಾಲ್.

ಹೃತಿಕ್ ಸಂಸಾರದಲ್ಲಿ ಬಿರುಗಾಳಿ ಏಳಲು ಅರ್ಜುನ್ ರಾಂಪಾಲ್ ಸಹ ಕಾರಣವಾಗಿದ್ದಾರೆ ಎನ್ನುವ ಸುದ್ದಿ ಎಲ್ಲರನ್ನೂ ತಲ್ಲಣಗೊಳಿಸಿತ್ತು.

ರಾಮ್ ಪಾಲ್ ಮತ್ತು ಸುಸಾನ ನಡುವೆ ಬೆಳೆಯುತ್ತಿರುವ ಸ್ನೇಹವೇ ಇಂತಹ ಘಟನೆಗೆ ಕಾರಣ ಎನ್ನುವ ಸುದ್ದಿ ಸಹ ಹೆಚ್ಚು ಪ್ರಭಾವಶಾಲಿಯಾಗಿ ಹರಿದಾಡಿತ್ತು.

ನಾನು ಮತ್ತು ಮೆಹರ್ ಸದಾ ಈ ಜೋಡಿ ಒಂದಾಗಿ ಬದುಕಲಿ ಎಂದೇ ಆಶಿಸಿದ್ದು. ಅವರ ಬದುಕನ್ನು ಸರಿಪಡಿಸುವುದಾಗಿತ್ತು ನಮ್ಮ ಉದ್ದೇಶ.ಆದರೇ ನನ್ನ ಬಗ್ಗೆ ಬಂದ ಊಹಾಪೋಹಗಳಿಂದ ಮನಕ್ಕೆ ತುಂಬಾ ನೋವಾಗಿದೆ. ಸ್ನೇಹಿತರ ಕುಟುಂಬಗಳು ಹಾಳಾಗಲಿ ಎಂದು ಯಾರೂ ಬಯಸಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

ಇಬ್ಬರು ಗೆಳೆಯರು ಇಂತಹ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ನಾವು ಸಹ ತುಂಬಾ ಎಚ್ಚರಿಕೆಯಿಂದ ಅದನ್ನು ಬಗೆಹರಿಸುವತ್ತ ಗಮನ ನೀಡ ಬೇಕಾಗುತ್ತದೆ. ಇದು ಬದುಕಿನ ಪ್ರಶ್ನೆ. ಆದರೆ ಇದನ್ನೆ ಕೆಟ್ಟದಾಗಿ ಹೇಳುವುದು ಅತ್ಯಂತ ಕೆಟ್ಟದ್ದು ಎಂದು ಹೇಳಿದ್ದಾರೆ ರಾಮ್ ಪಾಲ್

2000 ರಲ್ಲಿ ಮದುವೆಯಾದ ಹೃತಿಕ್ ಮತ್ತು ಸುಸಾನ್ ಕಳೆದ 13 ವರ್ಷಗಳಿಂದ ದಾಂಪತ್ಯ ಬದುಕಿನ ರಥ ಎಳೆಯುತ್ತಿದ್ದರು.ಸುಮಾರು 17 ವರ್ಷಗಳ ಸ್ನೇಹಕ್ಕೆ ಅವರಿಬ್ಬರು ವಿಚ್ಛೇದನದ ಮೂಲಕ ಕೊನೆ ಹಾಡಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments