Webdunia - Bharat's app for daily news and videos

Install App

ಹಾಟಿನಿ ಅನುಷ್ಕಾಗೆ ಫ್ಯೂಚರ್ ನಲ್ಲಿ ಒಳ್ಳೆ ಚಾನ್ಸ್

Webdunia
ಸೋಮವಾರ, 4 ನವೆಂಬರ್ 2013 (11:42 IST)
PR
ಬಾಲಿವುಡ್ ಚೆಲುವೆ ಅನುಷ್ಕ ಶರ್ಮಳದ್ದೆ ಈಗ ಬಿಟೌನ್ ನಲ್ಲಿ ಸುದ್ದಿ. ಈ ಸುಂದರಿ ಶಾರುಖ್ ಖಾನ್ ಚಿತ್ರದಿಂದ ಬಣ್ಣದಲೋಕದ ಪಯಣ ಆರಂಭಿಸಿದಳು. ಒಂದೇ ಬ್ಯಾನರ್ ಆಕೆಗೆ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿಸಿ ಕೊಟ್ಟಿತು. ಮೊದಲ ಚಿತ್ರದಲ್ಲಿ ಹೇಳಿಕೊಳ್ಳುವ ಪಾತ್ರ ಇಲ್ಲದೆ ಇದ್ರೂ ಎರಡನೇ ಚಿತ್ರದಲ್ಲಿ ಹಾಟ್ ಕಿಸ್ಸಿಂಗ್ ಸನ್ನಿವೇಶದಲ್ಲಿ ನಟಿಸುವ ಸೌಭಾಗ್ಯ. ಹೀಗೆ ಸಿನಿ ಲೈಫ್ ಆರಂಭಿಸಿದ ಅನುಷ್ಕ ಈಗ ಹಾಟಿನಿಗಳಲ್ಲಿ ಒಬ್ಬಳು . ಕೇವಲ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ ಆಕೆ ತನ್ನ ರಿಯಲ್ ಲೈಫ್ ನಲ್ಲೂ ಸಹ ಸುದ್ದಿ ಮಾಡಿದ್ದು ಬಾಯ್ ಫ್ರೆಂಡ್ ಗಳಿಂದ !

ಈಗ ಮತ್ತೆ ಆಕೆ ಎಲ್ಲರ ಗಮನ ತನ್ನ ಕಡೆ ಸೆಳೆದಿದ್ದಾಳೆ. ಕಾರಣ ಸಿನಿಮಾ ನಿರ್ಮಾಣ ಮಾಡುವ ಮುಖಾಂತರ. ಅಯ್ಯೋ ಹೌದು ಕಣ್ರೀ ಆಕೆ ಈಗ ಸಿನಿಮಾ ಪ್ರೊಡಕ್ಷನ್ ನಲ್ಲೂ ಮಗ್ನ ಇನ್ನು ಇಪ್ಪತ್ತೈದರ ಹರೆಯದ ಈ ಹೆಣ್ಣು ಆಗಲೇ ಇಷ್ಟೆಲ್ಲಾ ಸಾಧನೆ ಮಾಡಿದ್ದಾಳೆ ಅಂದ್ರೆ ಆಕೆಯ ವಿಶೇಷತೆ ಸುಮ್ಮನೆ ಅಲ್ಲ ಅಲ್ವೇ! ಈಗ ಆಕೆ ನಿರ್ಮಾಣ ಕಾರ್ಯದಲ್ಲಿ ಸಾಥ್ ನೀಡಿರುವ ಚಿತ್ರ ' NH 10' ಬಾಲಿವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾ ಜೊತೆ ಈಕೆ ಕೈ ಜೋಡಿಸಿದ್ದಾಳೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಈಕೆ ಪ್ರಮುಖ ಪಾತ್ರಧಾರಿ ಆಗಿದ್ದಾಳೆ. ಮುಂದೆಯೂ ಸಹ ಒಳ್ಳೆಯ ಪ್ರಾಜೆಕ್ಟ್ ಗಳಿಗೆ ಹಣ ಹೂಡುವುದಾಗಿ ಆಕೆ ತಿಳಿಸಿದ್ದಾಳೆ. ಒಳ್ಳೇದು ಬಿಡಿ ಮುಂದೆ ಚಾನ್ಸ್ ಸಿಗದೇ ಇದ್ದಾಗ ತನ್ನ ನಿರ್ಮಾಣದಲ್ಲೇ ನಟಿಸ ಬಹುದು.. !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments