Select Your Language

Notifications

webdunia
webdunia
webdunia
webdunia

ಸ್ಟಾರ್ ಕೈದಿ ಸಂಜಯ್ ದತ್ ಗೆ ಮತ್ತೆ ಪೆರೋಲ್ !

ಸ್ಟಾರ್ ಕೈದಿ ಸಂಜಯ್ ದತ್ ಗೆ ಮತ್ತೆ ಪೆರೋಲ್ !
, ಮಂಗಳವಾರ, 21 ಜನವರಿ 2014 (12:10 IST)
PR
ಬಾಲಿವುಡ್ ನಟ ಸಂಜಯ್ ದತ್ ಗೆ ಮತ್ತೆ ಬೇಲ್ ದೊರೆತಿದೆ. 1993 ರಲ್ಲಿ ನಡೆದ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರಿಗೆ ಶಿಷ್ಕೆ ಅನುಭವಿಸುತ್ತಿರುವ ಸಂಜು ಬಾಬ ಅವರು ಇನ್ನು ಹದಿನಾಲ್ಕು ತಿಂಗಳ ಕಾಲ ಕಾರಾಗೃಹದಲ್ಲಿ ಇರ ಬೇಕಿದೆ. ಕಳೆದ ವರ್ಷ ಅವರು ಜೈಲಿಗೆ ವಾಪಾಸಾದ ಬಳಿಕ ಎರಡು ಮೂರು ಬಾರಿ ಮನೆಗೆ ರಜೆಯ ಮೇಲೆ ಬಂದಿದ್ದರು. ಈಗ ಮತ್ತೆ ದಿನಗಳ ಕಾಲ ಪೆರೋಲ್ ಮೇಲೆ ಬಂದಿದ್ದಾರೆ ಸಂಜಯ್ ದತ್. ಅವರ ಪತ್ನಿ ಮಾನ್ಯಾತರಿಗೆ ಅನಾರೋಗ್ಯ ಇರುವ ಕಾರಣ ಅವರಿಗೆ ಪೆರೋಲ್ ಸಿಕ್ಕಿದೆ. ಕಳೆದ ವರ್ಷ ಡಿಸೆಂಬರ್ 6 ಕ್ಕೆ ಅವರಿಗೆ ನೀಡಲಾಗಿದ್ದ 30 ದಿನಗಳ ಪೆರೋಲ್ ಈ ತಿಂಗಳಲ್ಲಿ ಅಂದರೆ ಇಂದು ಪೂರ್ಣವಾಗುತ್ತಿದೆ . ಆದರೆ ಅವರಿಗೆ ಮಾನ್ಯತಾ ಅನಾರೋಗ್ಯದ ಕಾರಣದಿಂದ ಮತ್ತೆ ಮನೆಯಲ್ಲಿ ಉಳಿಯುವ ಅವಕಾಶ ದೊರೆತಿದೆ.

ತನ್ನ ಪತ್ನಿ ಮಾನ್ಯತಳಿಗೆ ಆರೋಗ್ಯ ಸರಿ ಇಲದ ಕಾರಣ ಆಕೆಯನ್ನು ನೋಡಿಕೊಳ್ಳಲು ತನ್ನ ಅವಶ್ಯಕತೆ ಇದೆ ಎನ್ನುವ ಮನವಿಯನ್ನು ಅಂಗೀಕರಿಸಿದ ಪೂಣೆ ಡಿವಿಷನಲ್ ಕಮೀಷನರ್ ಪ್ರಭಾಕರ್ ದೇಶ್ ಮುಖ್ ಸಂಜಯ್ ದತ್ ಅವರಿಗೆ ಮತ್ತೆ ಮುವ್ವತ್ತು ದಿನಗಳ ರಜೆಯನ್ನು ನೀಡಿದ್ದಾರೆ. ಮಾನ್ಯತಾ ಅವರಿಗೆ ಲಿವರ್ ಕ್ಯಾನ್ಸರ್ ಆಗಿದ್ದು, ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share this Story:

Follow Webdunia kannada