ಅದರ ಜೊತೆಗೆ ಈಗ ಮತ್ತೊಂದು ಸಂಗತಿ ಆತನಿಗೆ ಬೇಸರ ಹುಟ್ಟಿಸುವಂತಹದ್ದು ಎದುರಾಗಿದೆ. ಬಾಲಿವುಡ್ ನ ಸುಂದರ ಪ್ರತಿಭಾವಂತ ನಟಿ ಸೋನಾಕ್ಷಿ ಸಿಂಹ. ಆಕೆಯು ಅಭಿನಯಿಸಿದ ಚಿತ್ರಗಳು ಯಶಸ್ವಿ ಆಗಿದೆ. ಎಲ್ಲರ ಗಮನ ಸೆಳೆದಿದೆ. ಇಂತಹ ಪ್ರತಿಭೆಯ ಜೊತೆ ನ್ಮಹೇಶ್ ಬಾಬು ನಟಿಸದೆ ಇರಲು ಸಾಧ್ಯವೇ? ಆಕೆಗೆ ಪ್ರಿನ್ಸ್ ಜೊತೆ ನಟಿಸಲು ಅವಕಾಶ ನೀಡಿದರು ಒಳ್ಳೆ ನಾ ಒಳ್ಳೆ ಅಂತ ಹೇಳುತ್ತಿದ್ದಾಳೆ.
ಇದೆಲ್ಲ ಬಹಳ ಹಿಂದಿನ ಸಂಗತಿ. ಮತ್ತೊಮ್ಮೆ ಆಕೆಯನ್ನು ಪ್ರಿನ್ಸ್ ಜೊತೆ ನಟಿಸಲು ಕರೆದಾಗ ಮತ್ತೆ ಆ ಆಹ್ವಾನ ತಿರಸ್ಕರಿಸಿದ್ದಾಳೆ. ನಿಮಗೆ ಗೊತ್ತಿರೋ ಹಾಗೆ ಪ್ರಿನ್ಸ್ ಮಹೇಶ್ ಬಾಬು ಅವರು ಈಗ ಆಗಡು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಈ ಮಧ್ಯೆ ಮಣಿರತ್ನಂ ಅವರು ನ್ಹೊಚ್ಚ ಹೊಸ ಮಲ್ಟಿ ಸ್ಟಾರರ್ ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಎಲ್ಲರಿಗು ಗೊತ್ತಿದೆ.
ಅದರಲ್ಲಿ ನಾಗಾರ್ಜುನ, ಮಹೇಶ್ ಬಾಬು ಜೊತೆ ಐಶ್ವರ್ಯ ರಾಯ್ ನಟಿಸುತ್ತಿದ್ದಾರೆ. ಇಂತಹ ತಾರೆಯರ ಜೊತೆ ನಾನು ನಟಿಸಿದರೆ ತನ್ನ ಸ್ಟಾರ್ ವ್ಯಾಲ್ಯೂ ಕಡಿಮೆ ಆಗುತ್ತೆ ಅಂತ ಸೋನಾಕ್ಷಿ ತಿಳಿದಿದ್ದಾಳೆ ಎನ್ನುತ್ತಿದೆ ಟಾಲಿವುಡ್ .. ಹೌದಾ ತಾಯಿ !