Select Your Language

Notifications

webdunia
webdunia
webdunia
webdunia

ಸೈನಿಕರನ್ನು ಭೇಟಿ ಮಾಡಿದ ಹಂಸಿಕಾ

ಸೈನಿಕರನ್ನು ಭೇಟಿ ಮಾಡಿದ ಹಂಸಿಕಾ
ಮುಂಬೈ , ಗುರುವಾರ, 29 ನವೆಂಬರ್ 2007 (12:07 IST)
ಹಿಮೇಶ್ ರೇಶಾಮಿಯಾ ಅವರ ಆಪ್ ಕಾ ಸುರೂರ್ ಚಿತ್ರದಲ್ಲಿ ತನ್ನ ಅಭಿನಯದ ನಂತರ, ಯುವನಟಿ ಹಂಸಿಕಾ ಮೋತ್ವಾನಿ ಬಹು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಬಾರತ ಮತ್ತು ಪಾಕಿಸ್ತಾನದ ಸೈನಿಕರನ್ನು ಭೇಟಿ ಮಾಡಲು ವಾಘಾ ಗಡಿಗೆ ತೆರಳಿದ್ದಾಗ ಕೆಲವು ಪಾಕಿಸ್ತಾನ ಸೈನಿಕರು ಅವರನ್ನು ಗುರುತಿಸಿದ್ದಲ್ಲದೆ, ತಾವು ಹಂಸಿಕಾ ಅವರ ದೊಡ್ಡ ಅಭಿಮಾನಿಯೆಂದು ಹೇಳಿದ್ದಾರೆ.

ಜವಾನರನ್ನು ಭೇಟಿ ಮಾಡಬೇಕೆಂಬ ನಟಿಯ ಬಹುದಿನಗಳ ಆಸೆಯು ಇದರಿಂದಾಗಿ ನೆರವೇರಿದಂತಾಗಿತ್ತು. ಇದು ಸಾಧ್ಯವಾಗುವಂತೆ ಮಾಡಿದ ಅಮೃತಸರದ ಮೇಯರ್ ಮಿ. ಸೋನಿ ಅವರಿಗೆ ಧನ್ಯವಾದ ತಿಳಿಸಿದರು. ಸೈನಿಕರ ಭೇಟಿಯು ಹಂಸಿಕಾ ಅವರಿಗೆ ತುಂಬಾ ಖುಷಿಯನ್ನು ನೀಡಿದ್ದು, ದೇಶದ ನಾಗರಿಕರನ್ನು ರಕ್ಷಿಸುವ ಧೈರ್ಯವಂತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಒಂದು ಕ್ಷಣ ಭಾವುಕರಾಗಿದ್ದರು.

ಸೈನಿಕರ ಭೇಟಿ ನನ್ನ ಜೀವನದ ಒಂದು ಭಾವನಾತ್ಮಕ ಸನ್ನಿವೇಶವಾಗಿದೆ. ಪಾಕಿಸ್ತಾನದ ಸೈನಿಕರು ಕೂಡಾ ನನ್ನನ್ನು ಗುರುತಿಸಿರುವುದರ ಬಗ್ಗೆ ನಾನು ತುಂಬಾ ಆಶ್ಚರ್ಯಗೊಂಡಿದ್ದೇನೆ. ಅವರ ಮಮತೆಯ ಮಾತುಗಳು ನನ್ನನ್ನು ಹೃದಯಸ್ಪರ್ಶಿಯನ್ನಾಗಿ ಮಾಡಿದೆ. ಭಾರತದ ನಿಜವಾದ ಹೀರೋಗಳನ್ನು ಭೇಟಿ ಮಾಡುವ ಸಂದರ್ಭವು ಇನ್ನೂ ಹೆಚ್ಚು ಸಿಗಲಿ ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ತನ್ನ ಭೇಟಿಯ ಕುರಿತಾಗಿ ಹಂಸಿಕಾ ಅವರು ಹೇಳಿದ್ದಾರೆ.

Share this Story:

Follow Webdunia kannada