Select Your Language

Notifications

webdunia
webdunia
webdunia
webdunia

ಸೆಕ್ಸಿ ಸಮಂತ ಮೇಲೆ ದೂರು ದಾಖಲು !

ಸೆಕ್ಸಿ ಸಮಂತ ಮೇಲೆ ದೂರು ದಾಖಲು !
, ಮಂಗಳವಾರ, 21 ಜನವರಿ 2014 (12:06 IST)
PR
ಪ್ರಿನ್ಸ್ ಮಹೇಶ್ ಬಾಬು ಅವರ ಚಿತ್ರ ವನ್ ಚಿತ್ರದ ಪೋಸ್ಟರ್ ಬಗ್ಗೆ ತನಗಿಷ್ಟ ಬಂದಂತೆ ಕಾಮೆಂಟ್ ಮಾಡಿದ ನಟಿ ಸೆಕ್ಸಿ ಸಮಂತ ಬಗ್ಗೆ ಟಾಲಿವುಡ್ ಮಂದಿ ಸಿಟ್ಟಾಗಿದ್ದಾರೆ. ಅವಳಿಗೆ ಹೇರಳವಾಗಿ ಅವಕಾಶ ಕೊಟ್ಟ ಚಿತ್ರರಂಗದ ಬಗ್ಗೆ ಅಸಡ್ಡೆ ತೋರುವ ವಿಷಯದಲ್ಲಿ ಮುಂದು ಎಂಬುದನ್ನು ಆಕೆ ಮತ್ತೆ ಸಾಬೀತು ಮಾಡಿದ್ದಾಳೆ. ಅಂದು ಪೋಸ್ಟರ್ ಬಗ್ಗೆ ಕಾಮೆಂಟ್ ಮಾಡಿದರೆ ಇಂದು ಮೇಕಪ್ ಮತ್ತು ಆಕ್ಟಿಂಗ್ ಬಗ್ಗೆ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಸಿಕ್ಕಿದ್ದಾಳೆ .

ಸಮಂತ ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದಳು. ಅಲ್ಲಿಗೆ ಬಂದಿದ್ದ ಮೀಡಿಯಾ ಜೊತೆ ಮಾತನಾಡುತ್ತಾ ನಾನು ಕೇವಲ ಸಿನಿಮಾದಲ್ಲಿ ನಟಿಸೋದು . ಅನೇಕ ಹೀರೋಯಿನ್ ಗಳಂತೆ ಹೊರಗೂ ನಟಿಸಲು ನನಗೆ ಬರದು ಎಂದು ನೇರವಾಗಿ ಹಿಟ್ ಮಾಡಿದ್ದಾಳೆ ಮಾತಿನಲ್ಲಿ. ಮಾತಿನ ನಡುವೆ ಮೇಕಪ್ ಮತ್ತು ಆಕ್ಟಿಂಗ್ ವಿಷಯದಲ್ಲಿ ಆಕೆ ಆಡಿದ ಮಾತುಗಳು ಕಾಲಿವುಡ್ ಮಂದಿಗೂ ಕೋಪ ತರಿಸಿದೆ.

ಹೀರೋಯಿನ್ ಗಳಿಗೆ ಮತ್ತೊಬ್ಬರ ಮೇಲೆ ಸ್ಪರ್ಧೆ ಇರುವುದು ಸಹಜ ಆದರೆ ಅದಕ್ಕಾಗಿ ಈ ರೀತಿ ಬಾಯಿಗೆ ಬಂದಂತೆ ಮಾತಾಡುವುದು ಎಷ್ಟು ಸರಿ ಎಂದು ಸಿಟ್ಟಾದ ನಿರ್ಮಾಪಕರೊಬ್ಬರು ಕಾಲಿವುಡ್ ಫಿಲ್ಮ್ ಚೇಂಬರ್ ದೂರು ದಾಖಲಿಸಿದ್ದಾರೆ. ನೋಟೀಸ್ ಸಮಂತಳಿಗೆ ಕಳುಹಿಸಿದ್ದಾರಂತೆ!

Share this Story:

Follow Webdunia kannada