Select Your Language

Notifications

webdunia
webdunia
webdunia
webdunia

ಸುಷ್ಮಿತಾಗೆ ಕೈ ಕೊಟ್ಟ ಹೂಡಾಗೆ ಹೊಸ ಹುಡುಗಿ

ಸುಷ್ಮಿತಾಗೆ ಕೈ ಕೊಟ್ಟ ಹೂಡಾಗೆ ಹೊಸ ಹುಡುಗಿ
, ಶನಿವಾರ, 17 ಜನವರಿ 2009 (18:22 IST)
ಚೆಲುವೆ ಸುಷ್ಮಿತಾ ಸೇನ್ ಬಣ್ಣದ ಬದುಕಿಗೆ ಯಾರೋ ಹುಳಿ ಹಿಂಡಿದ್ದಾರೆ. ಯಾರೆಂದು ಅವಳೂ ಹೇಳುತ್ತಿಲ್ಲ, ಅವನೂ ಹೇಳುತ್ತಿಲ್ಲ. ಒಟ್ಟಾರೆ ರಣದೀಪ್ ಹೂಡ ಆಕೆಯ ಬದುಕಿನಿಂದ ದೂರ ಹೋಗಿರುವುದಂತೂ ಸತ್ಯ. ಅದನ್ನು ಆತ ಒಪ್ಪಿಕೊಳ್ಳದಿದ್ದರೂ ಬೇರೆ ಹುಡುಗಿಯ ಪ್ರವೇಶವಾಗಿರುವುದನ್ನು ಹೇಳಿಕೊಂಡಿದ್ದಾನೆ.

ಇದೀಗ 'ರಂಗ್ ರಸ್ಸಿಯಾ'ದಲ್ಲಿ ರಾಜಾ ರವಿವರ್ಮನ ಪಾತ್ರದಿಂದ ಸುದ್ದಿಯಲ್ಲಿರುವ ರಣದೀಪ್ ಹೂಡಾನಲ್ಲಿ ಸುಷ್ಮಿತಾ ಸೇನ್ ಬಗ್ಗೆ ಪ್ರಶ್ನಿಸಿದರೆ, ಅದು ನಮ್ಮ ಖಾಸಗಿ ವಿಚಾರ. ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದು ಹೇಳಿ ಬಾಯ್ಮುಚ್ಚಿಸುತ್ತಾನೆ.

ರಂಗ್ ರಸ್ಸಿಯಾದಲ್ಲಿ ನಂದನಾ ಸೇನ್ ಬೆತ್ತಲೆ ಮೈ ಮೇಲೆ ಕೈಯಾಡಿಸಿ ಕುಂಚ ಬಿಡಿಸಿರುವ ರವಿವರ್ಮ ಈ ರಣದೀಪ್ ಹೂಡಾ. ಚಿತ್ರದ ಬಗ್ಗೆ ನಿರೀಕ್ಷೆಗಳೂ ಹೆಚ್ಚಿವೆ. ಮುಂದಿನ ದಿನಗಳನ್ನೂ ಆ ಚಿತ್ರ ನಿರ್ಧರಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗದು.

'ಲವ್ ಕಿಚಿಡಿ' ಚಿತ್ರದಲ್ಲಿ ಇದೀಗ ಒಟ್ಟಿಗೆ ನಟಿಸುತ್ತಿದ್ದೀರಲ್ಲ. ಏನೂ ಕಷ್ಟ ಆಗೋದಿಲ್ವಾ ಅಂತ ಮತ್ತೆ ಕೆದಕಿ ಪ್ರಶ್ನಿಸಿದಾಗ, "ನಾವು ಒಟ್ಟಿಗೆ ಕೆಲಸ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಕೊಂಡಿಲ್ಲವಲ್ಲ.. ನಾವೆಲ್ಲ ನಟರು ಮತ್ತು ಸಿನಿಮಾ ಎನ್ನುವುದು ಟೀಮ್ ವರ್ಕ್. ನಾವಿಬ್ಬರೂ ಸಂತೋಷವಾಗಿದ್ದೇವೆ. ಮತ್ತೊಂದು ವಿಚಾರ ಎಂದರೆ ಈ ಚಿತ್ರದಲ್ಲಿ ಖ್ಯಾತ ಮಾಡೆಲ್ ನವೋಮಿ ಕ್ಯಾಂಬೆಲ್ ಕೂಡ ನಟಿಸುತ್ತಿದ್ದಾರೆ" ಎಂದು ಉತ್ತರಿಸಿದ್ದಾರೆ.

ಆದರೂ ತನ್ನ ಜೀವನದಲ್ಲಿ ಹೊಸ ಹುಡುಗಿಯೊಬ್ಬಳ ಪ್ರವೇಶವಾಗಿದೆ ಎಂಬುದನ್ನು ಒಪ್ಪಿಕೊಳ್ಳುವ ಹೂಡಾ, ಅವಳ್ಯಾರೆಂದು ಬಹಿರಂಗ ಪಡಿಸಲು ಒಪ್ಪುತ್ತಿಲ್ಲ. ನಾವಿಬ್ಬರೂ ಸುಂದರ ಸಂಬಂಧವನ್ನು ಹೊಂದಿದ್ದೇವೆ. ನೀವದಕ್ಕೆ ಹುಳಿ ಹಿಂಡಬೇಡಿ ಎನ್ನುವುದು ಹೂಡಾ ಸಲಹೆ.

ಬಿಡಿ, ಸುಷ್ಮಿತಾ ಸೇನ್ ಕೂಡ ಸುಮ್ಮನೆ ಕುಳಿತಿಲ್ಲ. ಒಬ್ಬ ಹೂಡಾ ಹೋದರೆ ಮತ್ತೊಬ್ಬ ಎಂಬಂತೆ ಆಕೆ ಈಗ ಅರೆಬಿಯನ್ ಉದ್ಯಮಿ ಆಲಿ ಅಲ್ ಆವಾಡಿ ಜತೆ ಡೇಟಿಂಗ್ ಮಾಡುತ್ತಿದ್ದಾಳೆ.

ಜಗತ್ತು ಸುಂದರವಾಗಿದೆ, ವಿಶಾಲವಾಗಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ. ಆಯ್ಕೆ ನಮ್ಮದು, ಚಿಂತೆ ನಿಮಗ್ಯಾಕೆ ಎನ್ನುವುದು ಅವಳ ಪ್ರಶ್ನೆ. ಬಿಟ್ಟು ಬಿಡಿ ನಮಗ್ಯಾಕೆ ಅವರ ಉಸಾಬರಿ.

Share this Story:

Follow Webdunia kannada