Select Your Language

Notifications

webdunia
webdunia
webdunia
webdunia

ಸುಶ್ಮಿತಾ ಮತ್ತೆ ನಟಿಸಲು ಸಿದ್ಧ ಆಗಿದ್ದಾರೆ... ಐಶ್ ಜೊತೆ !

ಸುಶ್ಮಿತಾ ಮತ್ತೆ ನಟಿಸಲು ಸಿದ್ಧ ಆಗಿದ್ದಾರೆ... ಐಶ್ ಜೊತೆ !
, ಬುಧವಾರ, 16 ಏಪ್ರಿಲ್ 2014 (09:22 IST)
PR
ನೋ ಪ್ರಾಬ್ಲಂ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕದೆ ಇದ್ರೂ ನೋ ಪ್ರಾಬ್ಲಂ ಎಂದು ಹೇಳಿದ ಸುಶ್ಮಿತಾ ಸೆನ್ ಈಗ ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ, ಅದೂ ನಾಲ್ಕು ವರ್ಷಗಳ ನಂತರ. ಸುಶ್ಮಿತಾ ಸೆನ್ ಮಾಜಿ ಮಿಸ್ ಯುನಿವರ್ಸ್ ಆಗಿದ್ದಂತಹ ಚೆಲುವೆ. ಈಕೆ ನೋ ಪ್ರಾಬ್ಲಂ ಅನ್ನುವ ಚಿತ್ರದಲ್ಲಿ ಅಭಿನಯಿಸಿದ ಬಳಿಕ ಚಿತ್ರರಂಗದ ಕಡೆ ಕಣ್ಣೆತ್ತಿ ನೋಡಿರಲಿಲ್ಲ.

ಈಗ ಮತ್ತೆ ಈ ನಟಿ ತನ್ನ ಪ್ರತಿಭೆ ತೋರೋದಿಕ್ಕೆ ಹೊರಟಿದ್ದಾರೆ. ಇಟ್ ವಾಸ್ ರೈನಿಂಗ್ ದಟ್ ನೈಟ್ ಅನ್ನುವ ಬೆಂಗಾಲಿ ಚಿತ್ರದಲ್ಲಿ ಅಭಿನಯಿಸಲು ಸಿದ್ಧ ಆಗಿದ್ದಾರೆ. ಇಷ್ಟು ವರ್ಷಗಳ ಬಳಿಕ ಆಕೆ ಬೆಂಗಾಲಿ ಚಿತ್ರದಲ್ಲಿ ನಟಿಸಲು ಮುಖ್ಯ ಕಾರಣ, ಸುಶ್ ಗೆ ಆ ಚಿತ್ರದ ಕಥೆಯು ಸಿಕ್ಕಾಪಟ್ಟೆ ಇಷ್ಟ ಆಯಿತಂತೆ. ರೂಪಾಲಿ ಗುಹ ಎನ್ನುವ ಮಹಿಳಾ ನಿರ್ದೇಶಕಿ ಈ ಚಿತ್ರದ ಆಕ್ಷನ್ ಕಟ್ ಹೊಣೆಗಾರಿಕೆ ಹೊತ್ತಿದ್ದಾರೆ.

ಈ ಚಿತ್ರಕಥೆಯೂ ಸುಶ್ ರನ್ನು ಅದೆಷ್ಟು ಪ್ರಭಾವ ಬೀರಿದೆ ಎಂದರೆ, ತಾವೇ ಇದರ ನಿರ್ಮಾಪಕಿ ಆಗಲು ಸಿದ್ಧ ಆಗಿದ್ದಾರೆ. ಈ ಚಿತ್ರದ ರೀಮೇಕ್ ಹಕ್ಕುಗಳನ್ನು ತೆಗೆದುಕೊಂಡು ಹಿಂದಿಯಲ್ಲಿ ಈ ಚಿತ್ರ ನಿರ್ಮಿಸುವ ಯೋಜನೆ ಹೊಂದಿದ್ದಾರೆ ಈಕೆ.

webdunia
PR
ಒಂದೆಡೆ ಬೆಂಗಾಲಿ ಚಿತ್ರದಲ್ಲಿ ನಟಿಸುತ್ತಿರುವ ಈ ತಾರೆ ಮತ್ತೊಂದೆಡೆ ಹ್ಯಾಪಿ ಆನಿವರ್ಸರಿ ಎನ್ನುವ ಹಿಂದಿ ಚಿತ್ರದಲ್ಲಿ ನಟಿಸಲು ಸಮ್ಮತಿ ಮುದ್ರೆ ಒತ್ತಿದ್ದಾರೆ. ಹಲವಾರು ಜಾಹೀರಾತು ಗಳ ನಿರ್ದೇಶನ ಮಾಡಿದ್ದ ಪ್ರಹ್ಲಾದ್ ಕಕ್ಕರ್ ಈ ಚಿತ್ರದ ನಿರ್ದೇಶಕರಾಗುತ್ತಿದ್ದಾರೆ.

ಐಶ್ವರ್ಯ ರಾಯ್ ಬಚ್ಚನ್ ಮತ್ತು ಅಭಿಷೆಶ್ ಬಚ್ಚನ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಂಡು ಬರುತ್ತಿದ್ದಾರೆ. ಹಿಂದೆ ಐಶ್ ಮತ್ತು ಸುಶ್ ನಡುವೆ ಬಾಂಧವ್ಯ ಅಷ್ಟೊಂದು ಚಂದ ಇರಲಿಲ್ಲ. ಈಗ ಅಂತಹ ಯಾವುದನ್ನು ಮನದಲ್ಲಿ ಇಟ್ಟುಕೊಳ್ಳದೆ ಐಶ್ವರ್ಯ ಜೊತೆ ನತಿಸೋಕೆ ನನಗೆ ಸಿಕ್ಕಾಪಟ್ಟೆ ಖುಷಿ ಆಗಿದೆ ಎಂದು ಹೇಳಿದ್ದಾರೆ ಸುಶ್!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada