Select Your Language

Notifications

webdunia
webdunia
webdunia
webdunia

ಸಿಂಗ್ ಈಸ್ ಕಿಂಗ್ ಅನ್ನು ಹಿಂದಿಕ್ಕಲಿರುವ ಗಜನಿ

ಸಿಂಗ್ ಈಸ್ ಕಿಂಗ್ ಅನ್ನು ಹಿಂದಿಕ್ಕಲಿರುವ ಗಜನಿ
ಅಮೀರ್ ಖಾನ್‌ರ ಗಜನಿ ದಾಖಲೆ ಬರೆಯಲು ಸನ್ನದ್ಧವಾಗುತ್ತಿದೆ. ದಿಪಾವಾಳಿ ಸಂದರ್ಭವೇ ಚಿತ್ರದ ಪ್ರಚಾರ ಮೊದಲ್ಗೊಂಡಿದ್ದು, ಚಿತ್ರವನ್ನು ಸ್ಟೂಡಿಯೊ 18 ಅವರು ಭಾರತದಾದ್ಯಂತ ವಿತರಿಸಲಿದ್ದಾರೆ. ಸಿಂಗ್ ಈಸ್ ಕಿಂಗ್ ಭಾರತದಲ್ಲಿ 1,050 ಪ್ರತಿಗಳಲ್ಲಿ ಬಿಡುಗಡೆಯಾಗಿತ್ತು, ಗಜನಿ ಸುಮಾರು 1,200 ಪ್ರತಿಗಳಲ್ಲಿ ಭಾರತದಾದ್ಯಂತ ವಿತರಣೆಯಾಗಲಿದೆ.
IFM

ಗಜನಿ ಹಿಂದೆಂದಿಗಿಂತಲೂ ಅತಿ ದೊಡ್ಡಮಟ್ಟದ ಬಿಡುಗಡೆಯಾಗಲಿದೆ, ಇದು ನಾವೇ ವಿತರಿಸಿದ್ದ ಸಿಂಗ್ ಈಸ್ ಕಿಂಗ್ ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಮುರಿಯಲಿದೆ ಎಂದು ಸ್ಟೂಡಿಯೊ 18 ನಿರ್ದೇಶಕ ಅಮನ್ ಗಿಲ್ ಹೇಳುತ್ತಾರೆ. ಚಿತ್ರಕ್ಕೆ ಮಾರುಕಟ್ಟೆ ಸೃಷ್ಟಿಸುವಲ್ಲಿ ಸಿಂಗ್ ಈಸ್ ಕಿಂಗ್ ಮೂಲಕ ನಾವು ಅಭೂತಪೂರ್ವ ದಾಖಲೆಯನ್ನು ಸೃಷ್ಟಿಸಿದ್ದೆವು ಈಗ ಗಜನಿ ಮೂಲಕ ಅದನ್ನು ಮೀರಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಗಜನಿ ಅತ್ಯದ್ಭುತ ಆರಂಭ ಕಾಣುವ ನಿರೀಕ್ಷೆಯಿದೆ.

Share this Story:

Follow Webdunia kannada