ಈಗಾಗಲೇ ಇಲಿಯು ಬರ್ಫಿ, ಫಟ ಪೋಸ್ಟರ್ ನಿಕ್ಲ, ಅಲ್ಲದೆ ಸೈಫ್ ಅಲಿ ಖಾನ್ ಜೊತೆ ಹ್ಯಾಪಿ ಎಂಡಿಂಗ್, ವರುಣ್ ಧವನ್ ಜೊತೆಯಲ್ಲಿ ಮೈ ತೇರ ಹೀರೋ ಚಿತ್ರಗಳಲ್ಲೂ ನಟಿಸಿದ್ದಾಳೆ. ಈಗ ಸಲ್ಮಾನ್ ಜೊತೆ ನಟಿಸುವ ಅವಕಾಶ ದೊರೆತದಕ್ಕೆ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ.
ಈ ಚಿತ್ರದಲ್ಲಿ ನಟಿಸುವುದು ಅತ್ಯಂತ ಗೌರವಾನ್ವಿತ ಕೆಲಸ ಆಗಿದೆ ಎಂದು ಈ ಸಮಯದಲ್ಲಿ ತಿಳಿಸಿದ್ದಾಳೆ .ಸಲ್ಮಾನ್ ಖಾನ್ ಹಾಗೂ ಸೂರಜ್ ಕಾಂಬಿನೇಶನ್ ನಲ್ಲಿ ಈವರೆಗೂ ಬಿಡುಗಡೆ ಆದ ಮೈನೆ ಪ್ಯಾರ್ ಕಿಯ, ಹಮ್ ಆಪ್ಕೆ ಹಾಯ್ ಕೌನ್, ಹಮ್ ಸಾಥ್ ಸಾಥ್ ಚಿತ್ರಗಳು ಸಂಪೂರ್ಣವಾದ ಯಶಸ್ಸು ಗಳಿಸಿತ್ತು. ಈಗ ಈ ಕಾಂಬಿನೇಶನ್ ನಲ್ಲಿ ತಯಾರಾಗುತ್ತಿರುವ ಹೊಚ್ಚ ಹೊಸ ಚಿತ್ರವೂ ಸಹಿತ ಹೆಚ್ಚು ಯಶಸ್ಸು ತನ್ನದಾಗಿಸಿಗಿಸಿಕೊಳ್ಳುತ್ತದೆ ಎನ್ನುವ ಮಾತು ಬಾಲಿವುಡ್ ಎಲ್ಲಡೆ ಕೇಳಿ ಬರುತ್ತಿದೆ.