Select Your Language

Notifications

webdunia
webdunia
webdunia
webdunia

ಸಲಿಂಗಕಾಮಿಯಾಗಿ ನಟಿಸಲಿರುವ ಕೊಂಕಣ ಸೇನ್

ಸಲಿಂಗಕಾಮಿಯಾಗಿ ನಟಿಸಲಿರುವ ಕೊಂಕಣ ಸೇನ್
ಬಾಲಿವುಡ್‌ನಲ್ಲೀಗ ಸಲಿಂಗಕಾಮಿಗಳ ಸುಗ್ಗಿ. ಅಂದರೆ, ಕಥಾ ವಸ್ತುಗಳನ್ನು ಇರಿಸಿಕೊಂಡು ರೀಲು ಸುತ್ತುತ್ತಿರುವುದು ನಡೆಯುತ್ತಿದೆ. ಅದರಲ್ಲಿ ಇತ್ತೀಚಿನದು ಜಾನ್ ಅಬ್ರಹಾಂ ಮತ್ತು ಅಭಿಶೇಕ್ ಬಚ್ಚನ್ ಅವರು ನಟಿಸಿರುವ ದೋಸ್ತಾನ. ಇದೀಗ ಇದೇ ಸಾಲಿಗೆ ಇನ್ನೊಂದು ಚಿತ್ರ 'ದಿ ಪ್ರೆಸಿಡೆಂಟ್ ಈಸ್ ಕಮಿಂಗ್' ಸೇರ್ಪಡೆಯಾಗಲು ಹೊರಟಿದ್ದು, ಇದರಲ್ಲಿ ಕೊಂಕಣ ಸೇನ್ ನಟಿಸಿದ್ದಾರೆ.

ರೋಹನ್ ಸಿಪ್ಪಿ ಅವರ ಸಿನಿಮಾ ಇದಾಗಿದ್ದು, ಕೊಂಕಣ್ ಮಾಯಾ ರಾಯ್ ಎಂಬ ಸಲಿಂಗಿಯ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಸಿನಿಮಾ ಯೂನಿಟ್ ಮೂಲಗಳು ಹೇಳಿವೆ. ಸಿನಿಮಾ ಇಂಗ್ಲೀಷ್‌ನಲ್ಲಿದ್ದು, ಕುನಾರ್ ರಾಯ್ ಕಪೂರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.

ಕುನಾಲ್ ಅವರು ಇದೇ ಕತೆಯ ನಾಟಕವನ್ನೂ ನಿರ್ದೇಶಿಸಿದ್ದರು. ಆದರೆ ಕೊಂಕಣ ಸೇನ್ ಸಿನಿಮಾ ಸಂಪೂರ್ಣಗೊಂಡ ಬಳಿಕವಷ್ಟೆ ಈ ನಾಟಕವನ್ನು ವೀಕ್ಷಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಮುನ್ನ ನಾಟಕ ನೋಡಿದರೆ ಅದು ತನ್ನ ನಟನೆಯ ಮೇಲೆ ಪ್ರಭಾವ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಅವರು ಮುಂಚಿತವಾಗಿ ನಾಟಕ ನೋಡಿರಲಿಲ್ಲವಂತೆ.

ಕೊಂಕಣ ಅವರು ಸಲಿಂಗಕಾಮಿ ಪಾತ್ರದಲ್ಲಿ ಅಭಿನಯಿಸಿರುವ ವಿಚಾರವನ್ನು ವೀಕ್ಷಕರಿಗೆ ಸರ್‌ಪ್ರೈಸ್ ನೀಡುವ ಉದ್ದೇಶದಿಂದ ಮುಚ್ಚಿಡಲಾಗಿತ್ತಂತೆ.

ಇದು ಆರು ಮಹತ್ವಾಕಾಂಕ್ಷಿ ಭಾರತೀಯರನ್ನೊಳಗೊಂಡ ಹಾಸ್ಯಭರಿತ ಚಿತ್ರವಂತೆ. ಈಮಹಾತ್ವಾಕಾಂಕ್ಷಿಗಳು ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಬುಶ್‌ಗೆ ಹಸ್ತಲಾಘವ ನೀಡುವ ಮಟ್ಟಕ್ಕೆ ತಲುಪುತ್ತಾರೆ.

Share this Story:

Follow Webdunia kannada