Webdunia - Bharat's app for daily news and videos

Install App

ಸನ್ನಿ ಅಭಿಯನದ ರಾಗಿಣಿ ಎಂಎಂಎಸ್ 2 ಟೀಸರ್ ಬಿಡುಗಡೆ

Webdunia
ಸೋಮವಾರ, 31 ಮಾರ್ಚ್ 2014 (16:12 IST)
ಬಾಲಿವುಡ್ ಚಿತ್ರರಂಗಕ್ಕೆ ಸನ್ನಿ ಲಿಯೋನ್ ಕಾಲಿಟ್ಟು ವರ್ಷವೊಂದು ಪೂರ್ಣವಾಯಿತು. ಇದೀಗ ಆಕೆಯ ಎರಡನೇ ಚಿತ್ರ ರಾಗಿಣಿ ಎಂಎಂಎಸ್2 ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಬಾರಿಯೂ ಸನ್ನಿ ತಮ್ಮ ಅಭಿಮಾನಿಗಳಿಗೆ ಮೋಸ ಮಾಡುತ್ತಿಲ್ಲ ಎಂದು ಭರವಸೆ ನೀಡಿದ್ದಾರಂತೆ. ಇದೀಗವಷ್ಟೇ ಅವರ ರಾಗಿಣಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಅವರಿಗೆ ಪ್ರಶಂಸೆಗಳೂ ಬಂದಿವೆಯಂತೆ. ಇಷ್ಟಕ್ಕೂ ಇದು 90 ಸೆಕೆಂಡ್ಗಳ ಕಾಲಾವಧಿಯ ಟೀಸರ್. ಇದರ ಬಿಡುಗಡೆಗೂ ಮುನ್ನ ಬಾಲಿವುಡ್ ಮಂದಿ ಅದಕ್ಕಾಗಿ ಕಾದು ಕುಳಿತಿದ್ದರು. ಮುಂದಿನ ವರ್ಷದ ಜನವರಿ ವೇಳೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಬಿಡುಗಡೆಯಾಗಿರುವ ಟೀಸರ್ಗೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ ಎನ್ನಲಾಗಿದೆ. ಶುಕ್ರವಾರದಿಂದ ಆನ್ಲೈನ್ನಲ್ಲಿ ಈ ಟೀಸರ್ ಹೊಸ ಹವಾ ಎಬ್ಬಿಸಿದೆ. ಭೂಷಣ್ ಪಟೇಲ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸನ್ನಿಯ ಅವತಾರ ನೋಡಲು ಪ್ರೇಕ್ಷಕರು ತೀವ್ರ ಕುತೂಹಲ ತಳೆದಿದ್ದಾರಂತೆ. ಹಾರರ್ ಹಾಗೂ ಸೆಕ್ಸ್ ಎರಡನ್ನೂ ಬ್ರೆಡ್ ಮತ್ತು ಜಾಮ್ನಂತೆ ಬೆಸೆದಿರುವ ಮೊದಲ ಚಿತ್ರ ಇದು ಎನ್ನಲಾಗಿದೆ. ಭಾರತೀಯ ಚಿತ್ರರಂಗದಲ್ಲೇ ಇದು ಹೊಸ ರೀತಿಯ ಪ್ರಯೋಗವಾಗಿದ್ದು ಹಾರೆಕ್ಸ್ ಚಿತ್ರ ಎಂದು ಇದನ್ನು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿ ಸನ್ನಿ ಸಲಿಂಗಸ್ತ್ರೀಕಾಮಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇವರಿಗೆ ಜತೆಯಾಗಿರುವವರು ಕಿರುತೆರೆ ನಟಿ ಸಂಧ್ಯಾ ಮೃದುಲ್. ಇವರಿಬ್ಬರೂ ಚಿತ್ರದಲ್ಲಿ ರೋಚಕವಾಗಿ ನಟಿಸಿದ್ದಾರೆ ಎನ್ನಲಾಗಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Show comments