Select Your Language

Notifications

webdunia
webdunia
webdunia
webdunia

ಶಾರೂಖ್ ಬಾಜಿಗರ್ ಗೆ ಈಗ 20 ವರ್ಷದ ಬರ್ತಡೇ

ಶಾರೂಖ್ ಬಾಜಿಗರ್ ಗೆ ಈಗ 20 ವರ್ಷದ ಬರ್ತಡೇ
, ಬುಧವಾರ, 13 ನವೆಂಬರ್ 2013 (12:53 IST)
PR
ಬಾಜಿಗರೋ ಬಾಜಿಗರ್ ಹಾಡು ಈಗಲೂ ಜನಮಾನಸದಲ್ಲಿ ಹಾಗೆ ಉಳಿದಿದೆ. ಅದಕ್ಕಿಂತ ಹೆಚ್ಚಾಗಿ ಕಿಂಗ್ ಖಾನ್ ಅವರ ನಟನೆಯೂ ಸಹ ಎಂದಿಗೂ ಮರೆಯಲಾಗದ್ದು. ಅದರಲ್ಲಿ ಶಾರೂಖ್ ಖಾನ್ ವಿಲನ್ ಆಗಿ ನಟಿಸಿದ್ದರು. ಈ ಚಿತ್ರ ಬಂದು ಈಗಾಗಲೇ 20 ವರ್ಷ ವಾಗಿದೆ. ಈ ಚಿತ್ರದ ಮೂಲಕ ಶಾರೂಖ್ ತಾರ ಬದುಕಿನಲ್ಲಿ ಮಹತ್ತರವಾದ ತಿರುವು ಕಂಡು ಬಂದಿತ್ತು.

ಈ ಚಿತ್ರದಲ್ಲಿ ಕಾಜೋಲ್, ಮತ್ತು ಶಿಲ್ಪಾ ಶೆಟ್ಟಿ ಶಾರೂಖ್ ಜೊತೆ ಆಗಿದ್ದರು. ಚಿತ್ರವು 1993 ರ ನವೆಂಬರ್ 12 ರಂದು ಬಿಡುಗಡೆ ಆಗಿತ್ತು. ಶಾರೂಖ್ ಬಾಜಿಗರ್ ಅಲ್ಲದೇ ಡರ್ ಮತ್ತು ಅಂಜಾಂ ಚಿತ್ರಗಳಲ್ಲೂ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿ ಕೊಂಡಿದ್ದರು. ಆದರೆ ಅವರು ಹೆಚ್ಚು ಜನಪ್ರಿಯರಾಗಿದ್ದು ಬಾಜಿಗರ್ ಚಿತ್ರದಲ್ಲಿ.
ಶಾರೂಖ್ ಈಗ ಫರಾ ಖಾನ್ ನಿರ್ದೇಶನದ ಚಿತ್ರ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಬ್ಯುಸಿ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಸೋನು ಸೂದ್, ದೀಪಿಕಾ ಪಡುಕೋಣೆ ಮತ್ತು ಬೊಮನ್ ಇರಾನಿ ಶಾರೂಖ್ ಜೊತೆ ಆಗಿದ್ದಾರೆ.

Share this Story:

Follow Webdunia kannada