Select Your Language

Notifications

webdunia
webdunia
webdunia
webdunia

ಶಾರುಖ್, ಅಮೀರ್, ಅಕ್ಷಯ್ ಮೇಲೆ ಬಾಲಿವುಡ್ ಭರವಸೆ

ಶಾರುಖ್, ಅಮೀರ್, ಅಕ್ಷಯ್ ಮೇಲೆ ಬಾಲಿವುಡ್ ಭರವಸೆ
ಈ ಬಾರಿ ಬಾಲಿವುಡ್‌ನಲ್ಲಿ ವ್ಯವಹಾರ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಿಗೆ ಪ್ರಭಾವಿತವಾಗಿದ್ದು, ತಳಮಟ್ಟ ಮುಟ್ಟಿದೆ. ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರಗಳು ಪ್ರದರ್ಶವನ್ನು ರದ್ದು ಪಡಿಸುವುದು ಅನಿವಾರ್ಯವಾಗಿದೆ. ದೋಸ್ತಾನ ಅದ್ಧೂರಿ ಪ್ರದರ್ಶನ ಮುಂದುವರೆಸಿರುವುದು ಬಿಟ್ಟರೆ, ನಂತರ ಬಿಡುಗಡೆಯಾದ ಯಾವುದೇ ಚಿತ್ರಗಳೂ ಚಿತ್ರಮಂದಿರಗಳಲ್ಲಿ ತಳವೂರುವುದೂ ಸಾಧ್ಯವಾಗುತ್ತಿಲ್ಲ. ಒಯ್ ಲಕ್ಕಿ ಒಯ್, ಸಾರಿ ಭಾಯ್, ಮಹಾರಾತ್ರಿ, ದಿಲ್ ಕಬಡ್ಡಿ, ಮೇರಾ ಭಾಯ್ ನಾಟ್ ಔಟ್ ಮತ್ತು ಒಹ್ ಮೈ ಗಾಡ್ ಈ ಎಲ್ಲಾ ಚಿತ್ರಗಳು ನೆಲಕಚ್ಚಿದ್ದು ಬಾಲಿವುಡ್‌ನ ಭರವಸೆಯನ್ನು ಪುಡಿಗಟ್ಟಿವೆ.
IFM

ಇದು ಬಾಲಿವುಡ್‌ಗೆ ಕಠಿಣ ಸಮಯ, ಆದರೆ ಮುಂಬರಲಿರುವ ಮೂರು ಬಹು ನಿರೀಕ್ಷೆಯ ಚಿತ್ರಗಳು ಪ್ರಸ್ತುತ ಸನ್ನಿವೇಶಗಳಿಂದ ಬಾಲಿವುಡ್ ಅನ್ನು ಹೊರತಂದು ನಿಟ್ಟುಸಿರು ಬಿಡುವಂತೆ ಮಾಡಲಿವೆ ಎಂಬ ಆಶಾವಾದವನ್ನೂ ಇರಿಸಿಕೊಳ್ಳಲಾಗಿದೆ. ಅವೆಂದರೆ, ಶಾರುಖ್ ಖಾನ್‌ರ 'ರಬ್ನೆ ಬನಾ ದಿ ಜೋಡಿ', ಅಮೀರ್ ಖಾನ್‌ರ 'ಗಜನಿ' ಮತ್ತು ಅಕ್ಷಯ್ ಕುಮಾರ್‌ರ 'ಚಾಂದಿನಿ ಚೌಕ್ ಟು ಚೀನಾ'. ಸರಿಸುಮಾರು 225 ಕೋಟಿ ರೂಪಾಯಿಗಳನ್ನು ಈ ಚಿತ್ರಗಳ ಮೇಲೆ ಹೂಡಲಾಗಿದೆ, ಟಿಕೆಟ್ ಕಿಟಕಿಗಳಲ್ಲಿ ಈ ಚಿತ್ರಗಳು ಎಷ್ಟು ಕಾರುಬಾರು ನಡೆಸಬಲ್ಲವು ಎಂಬುದರ ಮೇಲೆ ಚಿತ್ರೋದ್ಯಮದ ಭವಿಷ್ಯ ನಿಂತಿದೆ.

Share this Story:

Follow Webdunia kannada