Webdunia - Bharat's app for daily news and videos

Install App

ವೈರತ್ವ ತೊರೆದ ಪ್ರಿಯಾಂಕಾ ಚೋಪ್ರಾ ಹಾಗೂ ಕರೀನಾ ಕಪೂರ್

Webdunia
ಮಂಗಳವಾರ, 30 ಜುಲೈ 2013 (09:53 IST)
PTI
ಬಾಲಿವುಡ್ ಸೂಪರ್ ರ್ಸ್ಟಾರ್ಗಳಾದ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಫ್ತಾರ್ ಕೂಟವೊಂದರಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ವೃರತ್ವ ತೊರೆದು ಒಂದಾಗಿದ್ದು ನಿಮಗೆ ಗೊತ್ತೇ ಇದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದ ಇನ್ನೊಂದು ಹೆಸರು ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಜೋಡಿ.

ಕೆಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ತುಸು ಜಗಳ ನಡೆದಿತ್ತು. ಅದ್ಯಾವುದೋ ಕಾರಣಕ್ಕೆ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಿಕೊಂಡಿದ್ದರು. ಒಂದೇ ಪಾಟರ್ಿಯಲ್ಲಿ ಇವರಿಬ್ಬರು ಕಾಣಿಸಿಕೊಂಡರೂ ಪರಸ್ಪರ ಮಾತನಾಡುತ್ತಿರಲಿಲ್ಲ. ಫ್ಯಾಶನ್ ಚಿತ್ರದಲ್ಲಿ ನಟಿಸಿದ ಮೇಲೆ ಪ್ರಿಯಾಂಕಾಗೆ ಕೊಬ್ಬು ಬಂದಿದೆ ಎಂದು ಕರೀನಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕರೀನಾ ಒಬ್ಬ ಗ್ಲಾಮರ್ ಗೊಂಬೆ ಅಷ್ಟೇ, ಆಕೆ ನಟಿಯೇ ಅಲ್ಲ ಎಂದು ಪ್ರಿಯಾಂಕ ಉತ್ತರಿಸಿದ್ದರು.

ಇವೆಲ್ಲವೂ ಮಾಧ್ಯಮಗಳಲ್ಲಿ ಸುದ್ದಿಯಾಗಿ ಒಬ್ಬರನ್ನೊಬ್ಬರು ಮುಖ ಕಾಣದಷ್ಟು ದೂರವಾಗಿದ್ದರು. ಕೆಲವು ದಿನಗಳ ಹಿಂದೆ ಸಬರ್ಮನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಪ್ರಿಯಾಂಕಾ ಚೋಪ್ರಾ ಒಂದು ಫ್ಲೋರ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದರೆ, ಕರೀನಾ ಕಮರ್ಶಿಯಲ್ ಅಡ್ವಟೈರ್ಸಮೆಂಟ್ನಲ್ಲಿ ನಟಿಸುತ್ತಿದ್ದರು. ಅದು ಗೊತ್ತಾಗಿ ಸ್ವತಃ ಕರೀನಾ ಇದ್ದ ಸೆಟ್ಗೆ ಹೋಗಿ ಅಪ್ಪಿಕೊಂಡಿದ್ದಾರೆ. ಪ್ರಿಯಾಂಕಾ ಕೂಡಾ ಹಳೆಯದನ್ನೆಲ್ಲಾ ಮರೆತು ಕರೀನಾ ಜೊತೆ ಕೂತು ಹರಟಿದ್ದಾರೆ. ಈಗ ಇವರಿಬ್ಬರ ವೈರತ್ವ ಹೋಗಿ ಗೆಳೆತನ ಆರಂಭವಾಗಿದೆಯಂತೆ. ಈ ಸರದಿಯಲ್ಲಿ ಮುಂದೆ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments