ನೀವು ತಿಳಿದಂತೆ ಇಲ್ಲಿ ಅವರು ಕೇವಲ ಹಾಡುತ್ತಿಲ್ಲ, ಜೊತೆಗೆ ಕಂಠ ದಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಕೇವಲ ಹಾಡುತ್ತಿದ್ದರು, ಮೊಟ್ಟಮೊದಲ ಬಾರಿಗೆ ಕಂಠ ದಾನ ಮಾಡಿ ತಾವು ಭಿನ್ನ ರೀತಿಯಲ್ಲಿ ಜನರ ಮುಂದೆ ಬರುತ್ತಿದ್ದಾರೆ.
ಈ ಚಿತ್ರದ ಟೈಟಲ್ ಸಾಂಗ್ ಸಹ ಉಷಾ ಮೇಡಂ ಹಾಡಿದ್ದಾರಂತೆ. ಈ ಚಿತ್ರಕ್ಕೆ ಉಷಾ ಅವರ ಧ್ವನಿಗಿಂತ ಬೇರೆ ಇನ್ಯಾವುದೇ ಧ್ವನಿಯು ಸಹ ಸೂಟ್ ಆಗಲ್ಲ ಎನ್ನುವ ಕಾರಣದಿಂದ ಆಯ್ಕೆ ಮಾಡಿದ್ದಾರೆ. ಈಗ ಈ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣ ಆಗಿದೆ ಈ ಚಿತ್ರವೂ ಇದೆ ತಿಂಗಳು 25ಕ್ಕೆ ಬಿಡುಗಡೆ ಆಗಲಿದೆ.