ಇದರ ಬಗ್ಗೆ ಮಾತನಾಡುತ್ತಾ ಸೋನಾಕ್ಷಿ ತನಗೆ ಮೊದಲಿನಿಂದಲೂ ಅನಿಮೇಶನ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ ಎನ್ನುವುದನ್ನು ಮಾಧ್ಯಮದ ಮುಂದೆ ಇಟ್ಟರು.
ತನ್ನ ಬಳಿ ರಿಯಾ ಅನಿಮೇಶನ್ ಗೆ ಧ್ವನಿ ನೀಡಲು ಕೇಳಿದಾಗ ಹಿಂದೂ ಮುಂದೂ ನೋಡದೆ ಸಮ್ಮತಿಸಿದೆ ಎನ್ನುವ ಮಾತನ್ನು ಹೇಳಿದರು. ಈ ಅವಕಾಶ ಸಿಕ್ಕೊಡನೆ ಆಕೆಗೆ ಉದ್ವೇಗ ತಡೆಯಲಾಗಲಿಲ್ಲವಂತೆ ಹೀಗೆಂದು ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ. ಇದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಪ್ರಿಲ್ 11ರಂದು.