Webdunia - Bharat's app for daily news and videos

Install App

ರಾಮ್ಚರಣ್ ತೇಜಾ ಬಗ್ಗೆ ನಟ ಪ್ರಿಯಾಂಕಾಗೆ ಅಭಿಮಾನ

Webdunia
ಬುಧವಾರ, 11 ಸೆಪ್ಟಂಬರ್ 2013 (12:36 IST)
PR
ನಟಿ ಪ್ರಿಯಾಂಕಾ ಚೋಪ್ರಾ ನಟ ರಾಮ್ಚರಣ್ ತೇಜಾ ಅವರ ಬಗ್ಗೆ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಜಂಜೀರ್ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ಗೆ ಹೋಗುವವರೆಗೂ ರಾಮ್ಚರಣ್ ಅವರಿಗೆ ಇಷ್ಟೊಂದು ಅಭಿಮಾನಿಗಳಿದ್ದಾರೆ ಎಂದು ಗೊತ್ತಿರಲಿಲ್ಲವಂತೆ. ಈಗ ಚಿತ್ರದ ಪ್ರಚಾರಕ್ಕೆಂದು ಹೈದರಾಬಾದ್ಗೆ ಹೋಗಿದ್ದಾಗ ಅಲ್ಲಿನ ಜನ ರಾಮ್ಚರಣ್ ಅವರನ್ನು ಹೆಜ್ಜೆಹೆಜ್ಜೆಗೂ ಹಿಂಬಾಲಿಸುತ್ತಿರುವುದು ಕಂಡು ಅವರು ದಂಗಾಗಿದ್ದಾರಂತೆ.

1973 ರಲ್ಲಿ ತೆರೆಕಂಡಿದ್ದ ಹಿಂದಿಯ ಆಕ್ಷನ್ ಚಿತ್ರ ಜಂಜಿರ್ ಮರುಸೃಷ್ಟಿಯ ಚಿತ್ರದಲ್ಲಿ ರಾಮ್ಚರಣ್ ತೇಜಾ ಅವರೊಂದಿಗೆ ಪ್ರಿಯಾಂಕಾ ನಟಿಸಿದ್ದಾರೆ. ಈ ಚಿತ್ರಕ್ಕೆ ನಟಿಸುವ ಮುನ್ನ ರಾಮ್ಚರಣ್ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಅವರೊಂದಿಗೆ ಹೈದರಾಬಾದ್ಗೆ ತೆರಳಿದಾಗಲೇ ಅವರ ಜನಪ್ರಿಯತೆಯ ಬಗ್ಗೆ ಅರಿವುಂಟಾಗಿದ್ದು ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಪ್ರಿಯಾಂಕಾ. ಹೈದಾರಾಬಾದ್ ವಿವಿಧೆಡೆ ಚಿತ್ರೀಕರಣ ನಡೆಯುವ ಸ್ಥಳಕ್ಕೆಲ್ಲಾ ಅವರ ಕಟ್ಟಾ ಅಭಿಮಾನಿಗಳ ಗುಂಪು ಬರುತ್ತಿರುವುದು ಕಂಡು ನನಗೆ ಆಶ್ಚರ್ಯವಾಗುತ್ತಿತ್ತು. ನಿಜಕ್ಕೂ ರಾಮ್ಚರಣ್ ತೇಜಾ ದಕ್ಷಿಣದ ಸೂಪರ್ಸ್ಟಾರ್. ಆತನಿಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಅವರು ಸರಿಯಾಗಿ ಪ್ರೊಮೋಶನ್ಗೆ ಬರುತ್ತಿಲ್ಲ, ಟೈಮ್ಸೆನ್ಸ್ ಇಲ್ಲ ಎಂದು ಗರಂ ಮಾತುಗಳನ್ನಾಡಿದ್ದ ಪ್ರಿಯಾಂಕಾ ಅವರ ಅಭಿಮಾನಿ ಬಳಗವನ್ನು ಕಂಡು ಸುಮ್ಮನಾಗಿದ್ದಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments