Select Your Language

Notifications

webdunia
webdunia
webdunia
webdunia

ರಾಮ್ಚರಣ್ ತೇಜಾ ಬಗ್ಗೆ ನಟ ಪ್ರಿಯಾಂಕಾಗೆ ಅಭಿಮಾನ

ರಾಮ್ಚರಣ್ ತೇಜಾ ಬಗ್ಗೆ ನಟ ಪ್ರಿಯಾಂಕಾಗೆ ಅಭಿಮಾನ
ಮುಂಬೈ , ಬುಧವಾರ, 11 ಸೆಪ್ಟಂಬರ್ 2013 (12:36 IST)
PR
ನಟಿ ಪ್ರಿಯಾಂಕಾ ಚೋಪ್ರಾ ನಟ ರಾಮ್ಚರಣ್ ತೇಜಾ ಅವರ ಬಗ್ಗೆ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಜಂಜೀರ್ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ಗೆ ಹೋಗುವವರೆಗೂ ರಾಮ್ಚರಣ್ ಅವರಿಗೆ ಇಷ್ಟೊಂದು ಅಭಿಮಾನಿಗಳಿದ್ದಾರೆ ಎಂದು ಗೊತ್ತಿರಲಿಲ್ಲವಂತೆ. ಈಗ ಚಿತ್ರದ ಪ್ರಚಾರಕ್ಕೆಂದು ಹೈದರಾಬಾದ್ಗೆ ಹೋಗಿದ್ದಾಗ ಅಲ್ಲಿನ ಜನ ರಾಮ್ಚರಣ್ ಅವರನ್ನು ಹೆಜ್ಜೆಹೆಜ್ಜೆಗೂ ಹಿಂಬಾಲಿಸುತ್ತಿರುವುದು ಕಂಡು ಅವರು ದಂಗಾಗಿದ್ದಾರಂತೆ.

1973ರಲ್ಲಿ ತೆರೆಕಂಡಿದ್ದ ಹಿಂದಿಯ ಆಕ್ಷನ್ ಚಿತ್ರ ಜಂಜಿರ್ ಮರುಸೃಷ್ಟಿಯ ಚಿತ್ರದಲ್ಲಿ ರಾಮ್ಚರಣ್ ತೇಜಾ ಅವರೊಂದಿಗೆ ಪ್ರಿಯಾಂಕಾ ನಟಿಸಿದ್ದಾರೆ. ಈ ಚಿತ್ರಕ್ಕೆ ನಟಿಸುವ ಮುನ್ನ ರಾಮ್ಚರಣ್ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಅವರೊಂದಿಗೆ ಹೈದರಾಬಾದ್ಗೆ ತೆರಳಿದಾಗಲೇ ಅವರ ಜನಪ್ರಿಯತೆಯ ಬಗ್ಗೆ ಅರಿವುಂಟಾಗಿದ್ದು ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಪ್ರಿಯಾಂಕಾ. ಹೈದಾರಾಬಾದ್ ವಿವಿಧೆಡೆ ಚಿತ್ರೀಕರಣ ನಡೆಯುವ ಸ್ಥಳಕ್ಕೆಲ್ಲಾ ಅವರ ಕಟ್ಟಾ ಅಭಿಮಾನಿಗಳ ಗುಂಪು ಬರುತ್ತಿರುವುದು ಕಂಡು ನನಗೆ ಆಶ್ಚರ್ಯವಾಗುತ್ತಿತ್ತು. ನಿಜಕ್ಕೂ ರಾಮ್ಚರಣ್ ತೇಜಾ ದಕ್ಷಿಣದ ಸೂಪರ್ಸ್ಟಾರ್. ಆತನಿಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಅವರು ಸರಿಯಾಗಿ ಪ್ರೊಮೋಶನ್ಗೆ ಬರುತ್ತಿಲ್ಲ, ಟೈಮ್ಸೆನ್ಸ್ ಇಲ್ಲ ಎಂದು ಗರಂ ಮಾತುಗಳನ್ನಾಡಿದ್ದ ಪ್ರಿಯಾಂಕಾ ಅವರ ಅಭಿಮಾನಿ ಬಳಗವನ್ನು ಕಂಡು ಸುಮ್ಮನಾಗಿದ್ದಾರಂತೆ.

Share this Story:

Follow Webdunia kannada