Select Your Language

Notifications

webdunia
webdunia
webdunia
webdunia

ರಣಬೀರ್ ಕಪೂರ್ ಅಪ್ಪನಿಗೆ ಗರ್ಲ್ ಫ್ರೆಂಡ್ ಅನ್ನುವ ಪದದ ಅರ್ಥವೇ ಗೊತ್ತಿಲ್ಲವಂತೆ

ರಣಬೀರ್ ಕಪೂರ್ ಅಪ್ಪನಿಗೆ ಗರ್ಲ್ ಫ್ರೆಂಡ್ ಅನ್ನುವ ಪದದ ಅರ್ಥವೇ ಗೊತ್ತಿಲ್ಲವಂತೆ
, ಶನಿವಾರ, 7 ಡಿಸೆಂಬರ್ 2013 (10:30 IST)
PR
ಆ ಕಾಲದಲ್ಲಿ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಾಜ್ ಕಪೂರ್ ವಂಶದ ಕಿರಿ ಕುಡಿ ರಣಬೀರ್ ಕಪೂರ್. ಬಾಬ್ಬಿ , ಸಾಗರ್ ನಂತಹ ಚಿತ್ರಗಳಲ್ಲಿ ನಟಿಸಿದ್ದ ಅವರ ಅಪ್ಪ ರಿಷಿ ಕಪೂರ್ ಅವರಿಗೆ ಈ ಗರ್ಲ್ ಫ್ರೆಂಡ್ ಅಂದ್ರೆ ಅಷ್ಟೊಂದು ಇಷ್ಟ ಆಗೋದಿಲ್ಲವಂತೆ. ಮುಖ್ಯವಾಗಿ ಇಂತಹ ಕಾನ್ಸೆಪ್ಟ್ ತೀರಾ ಆಪ್ತವಲ್ಲವಂತೆ ಹಂಗಂತ ಹೇಳಿರೋದು ಬಾಲಿವುಡ್ ನ ಹ್ಯಾಂಡ್ಸಮ್ ಗೈ ರಣಬೀರ್ ಕಪೂರ್. ಸ್ಟಾರ್ ವರ್ಲ್ಡ್ ನಲ್ಲಿ ಮತ್ತೇ ಪ್ರಸಾರ ಆಗುತ್ತಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಸಾಕಷ್ಟು ಸುದ್ದಿ ಹರಡುತ್ತಿದೆ.

ಮೊದಲ ಎಪಿಸೋಡ್ ನಲ್ಲಿ ಸಲ್ಮಾನ್ ಖಾನ್ ನಾನು ಶುದ್ಧ ನನ್ನ ಶೀಲ ಇನ್ನೂ ಹಾಗೆ ಉಳಿದಿದೆ ನನ್ನವಳಿಗಾಗಿ ಎಂದ ಮಾತು ಇಡೀ ಚಿತ್ರರಂಗ ಅವರತ್ತ ನೋಡುವಂತೆ ಮಾಡಿದೆ. ಅದೇರೀತಿ ಹೆಣ್ಣುಮಕ್ಕಳ ಜೊತೆಯಾಗಿ ಇರುವ ರಣಬೀರ್ ಕಪೂರ್ ಸಹ ಇಂತಹದ್ದೇ ಭಾವನೆಗಳನ್ನು ಬಿಚ್ಚಿ ಎಲ್ಲರೂ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಎಪಿಸೋಡ್ ಭಾನುವಾರ ಪ್ರಸಾರ ಆಗುತ್ತಿದೆ.

ಆತನ ಅಪ್ಪ ರಿಷಿ ಕಪೂರ್ ಗರ್ಲ್ ಫ್ರೆಂಡ್ ಅನ್ನುವ ಬಾಂಧವ್ಯವನ್ನು ಸ್ವೀಕರಿಸಲ್ಲ ಅನ್ನುತ್ತಿರುವ ರಣಬೀರ್ ಅದ್ಯಾವ ಧೈರ್ಯದ ಮೇಲೆ ಸ್ಪೇನ್ ಬೀಚ್ ನಲ್ಲಿ ಅಷ್ಟಲ್ಲಾ ಅರೆಬೆತ್ತಲೆಯಾಗಿ ಕರೀನಾ ಜೊತೆ ಅಡ್ಡಾಡಿದರು ಎನ್ನುವ ಪ್ರಶ್ನೆ ಬಿಟೌನ್ ನಲ್ಲಿ ಟಾಕ್ ಆಫ್ ದ ಟೌನ್ ಆಗಿ ಪ್ರತಿಧ್ವನಿಸುತ್ತಿದೆ. ಕತ್ರಿನಾಳನ್ನು ಗರ್ಲ್ ಫ್ರೆಂಡ್ ಅಂತ ಪರಿಚಯಿಸಿದರೆ ನಿಮ್ಮ ತಂದೆ ಯಾವ ರೀತಿ ಪ್ರತಿಕ್ರಿಯಿಸ ಬಹುದು ಎಂಬ ಪ್ರಶ್ನೆಗೆ ರಣಬೀರ್ ಉತ್ತರ ನನಗೆ ಗೊತ್ತಿಲ್ಲ! 31 ರ ಹರೆಯದ ಈ ಬಾಲಕ ಅಮ್ಮನ ಮಗ. ಆತನ ಅವ್ವ ನೀತೂಗೆ ಮಗನೆಂದರೆ ಅಪಾರ ಮಮತೆ . ಅದಕ್ಕೆ ಆಕೆ ಹಾಗೆಲ್ಲಾ ಮಗನನ್ನು ಹುಡುಗೀರ ಹಿಂದೆ ಓಡಾಡೋಕೆ ಬಿಡಲ್ಲವಂತೆ!

Share this Story:

Follow Webdunia kannada