Select Your Language

Notifications

webdunia
webdunia
webdunia
webdunia

ಮೋದಿ ಜೀವನ ಚರಿತ್ರೆಯ ಹೊಸ ಚಿತ್ರ?

ಮೋದಿ ಜೀವನ ಚರಿತ್ರೆಯ ಹೊಸ ಚಿತ್ರ?
ಮುಂಬೈ , ಶನಿವಾರ, 24 ಆಗಸ್ಟ್ 2013 (10:33 IST)
PR
ಅಥ್ಲೀಟ್ ಮಿಲ್ಕಾ ಸಿಂಗ್ನ ಜೀವನ ಚರಿತ್ರೆಯನ್ನು ಆಧರಿಸಿದ ಭಾಗ್ ಮಿಲ್ಕಾ ಭಾಗ್ ಚಿತ್ರ ಬಿಡುಗಡೆಯಾಗಿ ಕೈತುಂಬಾ ದುಡ್ಡು ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದಾದ ಬಳಿಕ ಜೀವನ ಚರಿತ್ರೆಯನ್ನು ಆಧರಿಸಿದ ಕಥೆಗಳು ಚಿತ್ರವಾಗುತ್ತಿರುವುದು ಹೆಚ್ಚಿದೆ. ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಗಾಯಕ ಕಿಶೋರ್ ಕುಮಾರ್ ಜೀವನ ಚರಿತ್ರೆಯಲ್ಲಿ ರಣಬೀರ್ ಕಪೂರ್ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.

ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ. ಅವರ ಬಗ್ಗೆ ಚಿತ್ರ ಮಾಡಲು ಅನುಮತಿ ಕೇಳಲು ಮೋದಿ ಅವರನ್ನು ಸಂಪಕರ್ಿಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಮೋದಿ ಅವರ ಜೀವನ ಪ್ರಯಾಣ ನನಗೆ ಸಾಕಷ್ಟು ಸ್ಪೂರ್ತಿ ನೀಡಿದೆ. ಸಾಮಾನ್ಯನಾಗಿ ಚಾಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದದ್ದು ನಿಜಕ್ಕೂ ಗ್ರೇಟ್. ಅವರ ಬಾಲ್ಯ, ಆರ್ಎಸ್ಎಸ್ ಜೊತೆಗಿನ ಒಡನಾಟ, ಮುಖ್ಯಮಂತ್ರಿಯಾಗುವ ತನಕ ಅವರ ಪಯಣವನ್ನು ಚಿತ್ರದಲ್ಲಿ ನೋಡಬಹುದು. ಹಾಗೆಂದು ಇದು ಯಥಾವತ್ ಜೀವನ ಚರಿತ್ರೆಯಲ್ಲ, ಅವರ ಸ್ಪೂರ್ತಿದಾಯಕ ಅಂಶಗಳನ್ನು ಇಟ್ಟುಕೊಂಡು ಕಥೆ ಹೆಣೆದಿದ್ದೇವೆ ಎಂದಿದ್ದಾರೆ ನಿರ್ದೇಶಕ ಮಿತೇಶ್ ಪಟೇಲ್. ಯಥಾವತ್ ಜೀವನ ಚರಿತ್ರೆಯಲ್ಲವಾದ್ದರಿಂದ ಮೋದಿ ಅವರ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೂ ಅನಗತ್ಯ ವಿವಾದ ಬೇಡ ಎಂಬ ಕಾರಣಕ್ಕೆ ಒಪ್ಪಿಗೆಗಾಗಿ ಪತ್ರ ಕಳುಹಿಸಿದ್ದೇವೆ. ಮೋದಿ ಪಾತ್ರಕ್ಕೆ ಬಾಲಿವುಡ್ ನಟ ಪರೇಶ್ ರಾವಲ್ ಆಯ್ಕೆಯಾಗಿದ್ದಾರೆ.

Share this Story:

Follow Webdunia kannada