Select Your Language

Notifications

webdunia
webdunia
webdunia
webdunia

ಮೇರಿ ಕೋಮ್ ಪಾತ್ರ ಮಾಡಲೊಪ್ಪದ ರಾಣಿ ಮುಖರ್ಜಿ

ಮೇರಿ ಕೋಮ್ ಪಾತ್ರ ಮಾಡಲೊಪ್ಪದ ರಾಣಿ ಮುಖರ್ಜಿ
ಮುಂಬೈ , ಬುಧವಾರ, 17 ಜುಲೈ 2013 (12:13 IST)
PR
PR
ವೇಟ್ ಲಿಫ್ಟರ್ ಮೇರಿ ಕೋಮ್ ಜೀವನ ಚರಿತ್ರೆ ಆಧರಿಸಿ ಚಿತ್ರ ತೆಗೆಯುತ್ತಿರುವ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಆದರೆ ಈ ಮೊದಲು ಈ ಆಫರ್ ರಾಣಿ ಮುಖರ್ಜಿಗೆ ಹೋಗಿತ್ತಂತೆ. ಆದರೆ ರಾಣಿ ಇಲ್ಲಸಲ್ಲದ ಕಾರಣ ನೀಡಿ ಹಿಂದೆ ಸರಿದಿದ್ದಾರಂತೆ. ಹೀಗಾಗಿ ಇಂತಹ ಅವಕಾಶ ಪ್ರಿಯಾಂಕಾ ಮಡಿಲಿಗೆ ಬಿದ್ದಿದೆಯಂತೆ.

ಸಂಜಯ್ ಲೀಲಾ ಬನ್ಸಾಲಿ ತಮ್ಮ ಫೇವರಿಟ್ ನಟಿ ರಾಣಿ ಮುಖರ್ಜಿ ಮೇರಿ ಕೋಮ್ ಪಾತ್ರದಲ್ಲಿ ಅಭಿನಯಿಸಬೇಕೆಂದು ನಿರ್ಧರಿಸಿದ್ದರು. ಬ್ಲ್ಯಾಕ್ ಮತ್ತು ಸಾವರಿಯಾ ಚಿತ್ರದಲ್ಲಿ ಆಕೆಯೊಂದಿಗೆ ಕೆಲಸ ಮಾಡಿದ್ದ ಬನ್ಸಾಲಿಗೆ ರಾಣಿಯ ನಟನೆ ಇಷ್ಟವಾಗಿತ್ತು. ಆದರೆ ಅನುರಾಗ್ ಶರ್ಮಾ, ಸಚಿನ್ ಕುಂದಾಲ್ಕರ್ ಅವರಂತಹ ಹೊಸ ನಿರ್ದೇಶಕರಿಂದ ನೊಂದಿರುವ ರಾಣಿ ನಿರ್ದೇಶಕ ಒಮಂಗ್ ಕುಮಾರ್ ಪ್ರಸ್ತಾವನೆ ತಂದಾಗ ಒಲ್ಲೆ ಎಂದಿದ್ದಾರೆ.

ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಿ. ಬಳಿಕ ಇಷ್ಟವಾದರೆ ನಟಿಸುತ್ತೇನೆ ಎಂದ ರಾಣಿ ಮಾತು ಒಮಂಗ್ ಅವರಿಗೆ ಸಿಟ್ಟು ತರಿಸಿದೆಯಂತೆ. ಹೀಗಾಗಿ ಪ್ರಿಯಾಂಕಾ ಅವರಿಂದ ತರಾತುರಿಯಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ರಾಣಿ ಮುಖರ್ಜಿ ಈಗ ಒಂದು ಒಳ್ಳೆಯ ಅವಕಾಶ ಮಿಸ್ ಮಾಡಿಕೊಂಡ ಬೇಸರದಲ್ಲಿರಬಹುದೇ ಎಂಬ ಕುತೂಹಲ ಪ್ರಿಯಾಂಕಾ ಅಭಿಮಾನಿಗಳದ್ದು.

Share this Story:

Follow Webdunia kannada