Webdunia - Bharat's app for daily news and videos

Install App

ಮುತ್ತು ಕೊಟ್ರೆ ಏನು ತಪ್ಪು.. ಅದೀಗ ತುಂಬಾ ಕಾಮನ್ .. ಕೊಡ್ಲಿ ಬಿಡಿ...ಇದು ಎರಡು ಮುತ್ತಿನ ಕಥೆ!

Webdunia
ಸೋಮವಾರ, 31 ಮಾರ್ಚ್ 2014 (19:24 IST)
ಪಬ್ಲಿಕಲ್ಲಿ ಮುತ್ತು ಕೊಡೋ ಪರಂಪರೆ ಇದ್ದುದು ಹಿಂದಿನ ಕಾಲದಲ್ಲಿ, ಅದೂ ಮಕ್ಕಳಿಗೆ ಮಾತ್ರ. ಆದರೇ ಈಗ ಅದು ದೊಡ್ಡವರಿಗೂ ಸಹ ಅಪ್ಲೈ ಆಗುತ್ತಿದೆ. ಆದರೇ ಈ ರೀತಿ ಮುತ್ತು ಕೊಡುವ ಕಾರ್ಯಕ್ರಮ ನಡೆಯುವುದು ಬಾಲಿವುಡ್ ನಲ್ಲಿ ಮಾತ್ರ. ಇತ್ತೀಚೆಗೆ ಕನ್ನಡದ ಕರಾವಳಿ ಸುಂದರಿ ದೀಪಿಕಾ ಪಡುಕೋಣೆ ಮುತ್ತಮ್ಮ ಆಗಿ ಹೆಚ್ಚು ಪಾಪ್ಯುಲರ್ ಆಗಿದ್ದಾಳೆ. ಈ ಬಗ್ಗೆ ಕೇಳೋಕೆ ಹೋದ್ರೆ ಮುತ್ತು ಕೊಡುವುದನ್ನು ಎಲ್ಲರೂ ಭೂತಗಾಜಲ್ಲಿ ಇಟ್ಟು ನೋಡ್ತಾರೆ. ಇದೊಂದು ಕೆಟ್ಟ ಕೆಲಸ ಅಲ್ಲ. ಇದರ ಬಗ್ಗೆ ಯಾಕೆ ಜನ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೋ ಗೊತ್ತಾಗುತ್ತಿಲ್ಲ ಅಂತ ಬೇಜಾರಾಗಿದ್ದಾಳೆ. ಹಾಗೆ ಆಕೆಗೆ ಬೇಸರ ಆಗಲು ಕಾರಣವಿದೆ. ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ ಆಕೆಯನ್ನು ಒಬ್ಬಾತ ಮುದ್ದಾಡಿದ. ಅದನ್ನು ಡಿಪ್ಪಿ ಆರಾಮವಾಗಿ ಸ್ವೀಕರಿಸಿದಳು.

ತಮಾಷೆ ಅಂದರೇ ಕೇವಲ ಒಬ್ಬರಲ್ಲ ಮತ್ತೊಬ್ಬರೂ ಸಹ ಆಕೆಗೆ ಮತ್ತೊಂದು ಪಾರ್ಟಿಯಲ್ಲಿ ಇಷ್ಟೇ ರಭಸವಾಗಿ ಮುದ್ದು ಮಾಡಿದರಂತೆ. ಇಷ್ಟೆಲ್ಲಾ ಮುದ್ದಾಟ ಪಬ್ಲಿಕಲ್ಲಿ ನಡೆದರೆ ಸುಮ್ಮನೇ ಇರ್ತಾರ ಜನರು? ಈ ಎರಡು ಮುತ್ತಿನ ಕಥೆ ಬಗ್ಗೆ ಹೇಳುವುದಾದರೇ.. ಹೋಮಿ ಅಡ್ಜಾನಿಯಾ ನಿರ್ದೇಶನದಲ್ಲಿ ದೀಪಿಕಾ ಪಡುಕೋಣೆ ನಟಿಸಿರುವ ಫೈಂಡಿಂಗ್ ಫನ್ನಿ ಫರ್ನಾಂಡೀಸ್ ಚಿತ್ರ ಮುಂದಿನ ವರ್ಷ ಜುಲೈ 4 ರಂದು ಬಿಡುಗಡೆ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಡೆದ ಮೀಡಿಯ ಮೀಟ್ ನಲ್ಲಿ ಹೋಮಿ ಬಂದು ಡಿಪ್ಪಿಯನ್ನು ಸಿಕ್ಕಾಪಟ್ಟೆ ಮುದ್ದಾಡಿದರಂತೆ. ಅದನ್ನು ಖುಷಿಯಾಗಿ ಸ್ವೀಕರಿಸಿದ ಡಿಪ್ಪಿ ತಾನೂ ಸಹ!.. ಅದಾದ ಬಳಿಕ ಮತ್ತೊಂದು ಪಾರ್ಟಿಯಲ್ಲಿ ರಣವೀರ್ ಸಿಂಗ್ ಹೀಗೆ ಮಾಡಿದನಂತೆ. ಪಾರ್ಟಿಯಲ್ಲಿ ಒಂದು ಕಡೆ ತನ್ನ ಪಾಡಿಗೆ ತಾನು ಕುಳಿತಿದ್ದರೆ ದೀಪಿಕಾಳನ್ನು ಅಪ್ಪಿ ಮುದ್ದಾಡಿದನಂತೆ ರಣವೀರು ಪಬ್ಲಿಕ್ ಪ್ಲೇಸ್ ನಲ್ಲಿ !! ಇದರಿಂದ ಅಲ್ಲಿದ್ದವರು ಯಾವ ರೀತಿ ಫೀಲಿಂಗ್ ಅನುಭವಿಸಿದರೋ ಗೊತ್ತಿಲ್ಲ ಆದರೇ ದೀಪಿಕಾ ಮಾತ್ರಒಂದು ಗಳಿಗೆ ಹೆದರಿ ಬಿಟ್ಟಳಂತೆ. ಆಮೇಲೆ ಇದು ಬೇರೆ ಯಾರ ಕೆಲಸವೂ ಅಲ್ಲ ರಾಮ್ ಲೀಲಾ ಕಿಸ್ಸರ್ ಬಾಯ್ ದು ಅಂತ ತಾನೂ ಸಹ ಆತನಿಗೆ ಮುತ್ತಿನ ಸುರಿಮಳೆ!

ಇದಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಈ ಜಾಸ್ತಿ ಜೋರಾಗಿ ಬಿಟೌನ್ ನಲ್ಲಿ ಹರಿದಾಡಿದೆ. .ಏನ್ ಡಿಪ್ಪಿ ಇದು ಎಂದು ಆಕೆಯ ಆಪ್ತರು ಕೇಳಿದಾಗ ತಪ್ಪೇನು ಮುತ್ತು ಕೊಡುವುದರಲ್ಲಿ? ಇದು ಅಪರಾಧದ ಕೆಲಸವಲ್ಲ ಅಂತ ನಿಷ್ಠುರವಾಗಿ ಹೇಳಿದ್ದಾಳೆ. ಹಾಗಂತ ಎಲ್ಲರಿಗೂ ಈ ಚಾನ್ಸ್ ಸಿಗುತ್ತೆ ಎಂದು ನೀವು ತಿಳಿದರೆ ಅದು ಖಂಡಿತಾ ನಿಮ್ಮ ತಪ್ಪು ಕಲ್ಪನೆ ಹುಡುಗರೇ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments