Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಸ್ವಂತ ಮನೆ: ಇನ್ನೂ ಈಡೇರದ ಕನಸು

ಮುಂಬೈನಲ್ಲಿ ಸ್ವಂತ ಮನೆ: ಇನ್ನೂ ಈಡೇರದ ಕನಸು
ಮುಂಬೈ , ಬುಧವಾರ, 31 ಜುಲೈ 2013 (10:01 IST)
PTI
ಕತ್ರಿನಾ ಕೈಫ್ ಅವರ ಬಹಳಷ್ಟು ಆಸೆಗಳು, ಕನಸುಗಳು ಈಡೇರಿವೆ. ಆದರೆ ಅವರ ಕೈಗೂಡದ ಒಂದೇ ಒಂದು ಬಯಕೆಯೆಂದರೆ ಮುಂಬೈಯಲ್ಲಿ ಒಂದು ಸ್ವಂತ ಮನೆ ಮಾಡಿಕೊಳ್ಳುವುದು.

ಅವರು ಬಾಲಿವುಡ್ಗೆ ಬಂದು ಒಂದು ದಶಕವೇ ಕಳೆದಿದೆ. ಮೈ ನೇಮ್ ಶೀಲಾ, ಎಂದು ಮೈ ಕುಲುಕಿಸಿ ಹಾಡಿದ್ದಾಗಿದೆ, ಬೆಲ್ಲಿ ಡಾನ್ಸ್ ಮಾಡಿದ್ದಾಗಿದೆ, ಗಿಟಾರ್ ಹಿಡಿದು ಹೆಜ್ಜೆ ಹಾಕಿದ್ದೂ ಆಗಿದೆ. ಅದರೊಂದಿಗೆ ಮುದ್ದು ಹುಡುಗ ರಣಬೀರ್ ಕಪೂರ್ ಅವರ ಪ್ರೇಮ ಸಂಪಾದಿಸಿದ್ದೂ ಆಗಿದೆ.

ಆದರೆ ಸ್ವಂತ ನಿವೇಶನ ಕೊಳ್ಳುವ ಅವರ ಕನಸಿನ್ನೂ ನನಸಾಗಿಲ್ಲ. ಅವರೊಂದಿಗೆ ಚಿತ್ರರಂಗಕ್ಕೆ ಬಂದ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ತಮ್ಮ ತಲೆ ಮೇಲೊಂದು ಸೂರು ಮಾಡಿಕೊಂಡಿದ್ದಾರೆ. ಆದರೆ ನಾಲ್ಕೈದು ವರ್ಷಗಳಿಂದ ಮನೆ ಹುಡುಕುತ್ತಿರುವ ಕತ್ರಿನಾಗೆ ಈ ಭಾಗ್ಯವಿನ್ನೂ ಒಲಿದಿಲ್ಲ. ಬಾಂದ್ರಾದಲ್ಲಿರುವ ಅವರ ಮನೆಗೆ ದುಬಾರಿ ಬಾಡಿಗೆ ತೆರುವ ಪರಿಪಾಠವೇ ಮುಂದುವರೆದಿದೆ.
ಒಮ್ಮೆ ಅವರು ಕಾರ್ಟರ್ ರಸ್ತೆಯಲ್ಲಿರುವ ಫಿಲ್ಮಂ ಮೇಕರ್ ಒಬ್ಬರ ಮನೆ ಕೊಳ್ಳುವ ಮನಸ್ಸು ಮಾಡಿದ್ದರು.

ಆದರೆ ಕೊನೆಗೆ ಅದನ್ನು ಬದಲಾಯಿಸಿಬಿಟ್ಟರು. ಲಂಡನ್ನಂತಹ ಮಹಾನಗರಿಯಲ್ಲಿ ಸ್ವಂತಮನೆ ಹೊಂದಿರುವ ಈ ಚೆಲುವೆಗೆ ಮುಂಬೈಯಂತಹ ಮಾಯಾನಗರಿಯಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲವೆಂದರೆ...ಅಯ್ಯೋ ಪಾಪ...!!!

Share this Story:

Follow Webdunia kannada